ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಿಂದ ಇನ್ನೂ ಹೊರಗಿರುವ 1031 ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು, ಮುಖ್ಯಮಂತ್ರಿ ಪಿಣರಯಿ ವಿಜಯನ್ ಅವರು ವಿಧಾನಸಭೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಮುಂತದ ಬೇಡಿಕೆಗಳೊಂದಿಗೆ ಎಂಡೋಸಲ್ಫಾನ್ ವಿರುದ್ಧ ಹೋರಟ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಸಾಹಿತಿ ಬೀರನ್ಕುಟ್ಟಿ ಧರಣಿ ಉದ್ಘಾಟಿಸಿದರು. ಎಂಡೋಸಲ್ಫಾನ್ ವಿರುದ್ಧ ಹೋರಾಟ ಸಮಿತಿ ಅಧ್ಯಕ್ಷ ಸಿ.ಎಚ್.ಬಾಲಕೃಷ್ಣನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂಬಲತ್ತರ ಕುಞÂಕೃಷ್ಣನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಮತ್ತೆ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಧರಣಿ ಆಯೋಜಿಸಲಾಗುವುದು ಎಂದುಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಡಾ.ಡಿ.ಸುರೇಂದ್ರನಾಥ್, ಫಾದರ್ ಜೋಸ್, ಹಮೀದ್ ಚೇರಂಗೈ, ಸಿ.ವಿ.ನಳಿನಿ, ಮೇರಿ ಸುರೇಂದ್ರನಾಥ್, ಅಹಮದ್ ಚೌಕಿ, ಮೊಹಮ್ಮದ್ ಇಚಿಲಂಗೋಡು, ಕರೀಂ ಚೌಕಿ, ಸಿ.ಟಿ.ಹಾಜಿ, ಕೃಷ್ಣನ್ ಮೇಳತ್, ಮಾಧವನ್ ಮಾಸ್ಟರ್, ಕನಕರಾಜ್, ತಂಬಾನ್, ಹೋರಾಟ ಸಮಿತಿ ಸಂಚಾಲಕಿ ಪ್ರಮೀಳಾ ಚಂದ್ರನ್ ಸ್ವಾಗತಿಸಿದರು.


