ಕಾಸರಗೋಡು: ಕೇರಳ ರಣಜಿ ತಂಡಕ್ಕೆ ಮೊಹಮ್ಮದ್ ಅಜರುದ್ದೀನ್ ಸೇರ್ಪಡೆಗೊಂಡಿರುವ ಬೆನ್ನಿಗೆ ಕಾಸರಗೋಡಿನ ಇಬ್ಬರು ತಾರೆಯರು 19 ವರ್ಷದೊಳಗಿನವರ ಉತ್ತರ ವಲಯ ಕ್ರಿಕೆಟ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮುಹಮ್ಮದ್ ರೆಹಾನ್ ಮತ್ತು ಆಶಿಶ್ ಮಣಿಕಂಠನ್ ತಂಡಕ್ಕೆ ಆಯ್ಕೆಯಾದವರು. ಅಂತರ್ಜಿಲ್ಲಾ ಪ್ರದರ್ಶನದ ಮೂಲಕ ಇಬ್ಬರೂ ಅಂಡರ್-19 ಉತ್ತರ ವಲಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರೆಹಾನ್ ಅವರು ಕಾಸರಗೋಡಿನ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ನಾಚು ಸ್ಪೋಟ್ರ್ಸ್ ಲೈನ್ ಅವರ ಪುತ್ರನಾಗಿದ್ದು, ಆಶಿಶ್ ಮಣಿಕಂಠ ಅವರು ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂ ಸನಿಹದ ನಿವಾಸಿ ಮಣಿಕಂಠನ್ ಕೂಕ್ಕಲ್ ಅವರ ಪುತ್ರ.
ಕೋಯಿಕ್ಕೋಡ್ ವಿರುದ್ಧದ ಪಂದ್ಯದಲ್ಲಿ ರೆಹಾನ್ ಹಾಗೂ ವಯನಾಡು ಜಿಲ್ಲೆ ವಿರುದ್ಧದ ಪಂದ್ಯಾಟದಲ್ಲಿ ಆಶಿಶ್ ಉತ್ತಮ ಸಾಧನೆ ತೋರಿದ್ದರು.


