ಕಾಸರಗೋಡು: ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಿಂದಳ ಕೀಳ್ವಾಲ ಕರುವಾಟ್ ಹೌಸ್ ನಿವಾಸಿ ಐಶ್ವರ್ಯಾ(20)ಸೋಮವಾರ ಬೆಳಗ್ಗೆ 9ಕ್ಕೆ ಮನೆಯಿಂದ ಹೊರಟಿದ್ದು, ವಾಪಸಾಗಿಲ್ಲ ಎಂದು ತಂದೆ ಕೃಷ್ಣನ್ ನೀಡಿದ ದೂರಿನನ್ವಯ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಚೀಮೇನಿ ಕ್ಲಾಯಿಕ್ಕೋಡು ನಿವಾಸಿ ನಿವಾಸಿ ಸುನಿಲ್ ಎಂಬವರ ಪತ್ನಿ ಕೆ.ಟಿ ಬೀನಾ(40)ನಾಪತ್ತೆಯಾಗಿರುವ ಬಗ್ಗೆ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ತನ್ನ ಮಗುವನ್ನು ಅಂಗನವಾಡಿಗೆ ಕರೆದುಕೊಂಡುಹೋಗಿದ್ದ ಬೀನಾ ಮನೆಗೆ ವಾಪಸಾಗಿಲ್ಲ ಎಂದು ಪತಿ ಸಹೋದರ ಸತೀಶನ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

