ಕಾಸರಗೋಡು: ಬಾಲಗೋಕುಲ ಉದುಮ ತಾಲೂಕು ಮಟ್ಟದ ವಾರ್ಷಿಕ ಸಮ್ಮೇಳನವು ಕುಂಡಂಕುಳಿಯ ಹರಿಶ್ರೀ ವಿದ್ಯಾಲಯದಲ್ಲಿ ನಡೆಯಿತು. ಶ್ರೀದೇವಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕಿ ಲತಾ ಪ್ರಕಾಶ್ ರಾವ್ ಬೆಳ್ಳೂರಡ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸನಾತನ ಸಂಸ್ಕøತಿಯ ಮೌಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಬದುಕು ಸಾಗಿಸಲು ಪ್ರತಿಯೊಬ್ಬ ಪಣತೊಡಬೇಕು ಎಂದು ತಿಳಿಸಿದರು.
ನಿವೃತ್ತ ಕಲಾ ಶಿಕ್ಷಕ ರಾಘವನ್ ಮಾಸ್ಟರ್ ಚೋಟ್ಟಾ ಅಧ್ಯಕ್ಷತೆ ವಹಿಸಿದ್ದರು. ಬಾಲಗೋಕುಲ ಜಿಲ್ಲಾಧ್ಯಕ್ಷ ಬಾಬು ಮಾಸ್ಟರ್ ಮುಖ್ಯ ಭಾಷಣ ಮಾಡಿದರು. ಬಾಲಗೋಕುಲ ಜಿಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ರಾಮಚಂದ್ರನ್ ಕರಿವೇಡಗಂ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ರಮಾನಂದ ಕುಂಡಂಕುಳಿ ವಂದಿಸಿದರು.
ಈ ಸಂದರ್ಭ ಬಾಲಗೋಕುಲ ಉದುಮ ತಾಲೂಕು ಮಟ್ಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಾರಾಯಣನ್ ವಡಕಿನಿಯ ಅಧ್ಯಕ್ಷ, ಜಯಚಂದ್ರ ಕುಂಡಂಪಾರ ಉಪಾಧ್ಯಕ್ಷ, ರಾಮಚಂದ್ರನ್ ಪಿ. ಎಂ. ಕುತ್ತಿಕ್ಕೋಲ್ ಕಾರ್ಯದರ್ಶಿ, ರತೀಶ್ ಪಿ.ವಿ. ಚಾಲಕ್ಕಲ್ ಹಾಗೂ ರಮಾನಂದ ಕುಂಡಂಕುಳಿ ಜತೆ ಕಾರ್ಯದರ್ಶಿಗಳು ಹಾಗೂ ಗೋಪಿನಾಥನ್ ಕುತ್ತಿಕ್ಕೋಲ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.


