ನವದೆಹಲಿ: ಕೇಂದ್ರ ಸರ್ಕಾರದ ಒಂದು ಜಿಲ್ಲಾ ಉತ್ಪನ್ನ ಯೋಜನೆಯಲ್ಲಿ ವಯನಾಡನ್ ಕಾಫಿಗೆ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಉಲ್ಲೇಖ ದೊರೆತಿದೆ.
ಕೇರಳದ ಉತ್ಪನ್ನವೊಂದು ಈ ಮನ್ನಣೆ ಪಡೆದಿರುವುದು ಇದೇ ಮೊದಲು. ವಯನಾಡನ್ ಕಾಫಿಗೆ ವರ್ಗ ಎ ಕೃಷಿ ವಿಭಾಗದಲ್ಲಿ ಮನ್ನಣೆ ನೀಡಲಾಗಿದೆ.
ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ, ಕೈಗಾರಿಕಾ ಇಲಾಖೆಯ ನಿರ್ದೇಶಕ ವಿಷ್ಣು ರಾಜ್, ಜನರಲ್ ಮ್ಯಾನೇಜರ್ ಬಿ ಗೋಪಕುಮಾರ್ ಮತ್ತು ಅಶ್ವಿನ್ ಪಿ ಕುಮಾರ್ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರಶಸ್ತಿಗಳನ್ನು ವಿತರಿಸಿದರು.
ವಯನಾಡಿನ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಜಿಐ ಟ್ಯಾಗ್ ಮಾಡಲಾದ ರೋಬಸ್ಟಾ ಕಾಫಿಯ ಮಾರುಕಟ್ಟೆ ಸಾಮಥ್ರ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಇದು ಸಹಾಯ ಮಾಡಲಿದೆ.


