ಕಾಸರಗೋಡು: ಮೊಗ್ರಾಲ್‍ಪುತ್ತೂರು ಕಲ್ಲಂಗೈಯಲ್ಲಿ ಪಿಕ್‍ಅಪ್ ವಾಹನ ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಹಲವು ಮಂದಿ ಮೀನು ಕಾರ್ಮಿಕರು ಗಾಯಗೊಂಡಿದ್ದಾರೆ. ಕುಂಬಳೆ ಕೊಯಿಪ್ಪಾಡಿ ನಿವಾಸಿಗಳಾದ ವೇಣು, ಮಹೇಶ್, ಮಾಧವನ್, ಉವೈಸ್, ಮಣಿ, ರಾಜೇಶ್, ಸತೀಶನ್, ವೇಣು, ಸಾಯುಜ್, ಪ್ರಮೇಶ್, ಬಾಬು, ಉಮೇಶನ್, ಕೃಷ್ಣನ್ ಗಾಯಾಳುಗಳು. ಇವರಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಭಾನುವಾರ ಸಂಜೆ ಮೀನುಗಾರಿಕೆ ಕಳೆದು ಕಸಬಾ ಅಳವೆಯಲ್ಲಿ ದೋಣಿ ನಿಲ್ಲಿಸಿ ಪಿಕ್‍ಅಪ್ ವಾಹನದಲ್ಲಿ ಮನೆಗೆ ತೆರಳುವ ಮಧ್ಯೆ ಕಲ್ಲಂಗೈ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತಕ್ಕೀಡಾಗಿತ್ತು.

