ಬದಿಯಡ್ಕ: ಮಾನ್ಯ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘದ 31ನೇ ವಾರ್ಷಿಕೋತ್ಸವವು ಇಂದು(ಡಿ.20) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಪ್ರಾತಃಕಾಲ ದೀಪ ಪ್ರತಿಷ್ಠೆ, ಶರಣಂ ವಿಳಿ, 7.30ಕ್ಕೆ ಭಜನೆ ಆರಂಭ, ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾಮಂದಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ ಇವರಿಂದ ದೀಪಪ್ರಜ್ವಲನೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಅನ್ನದಾನ, ಅಪರಾಹ್ನ 2ರಿಂದ ವಿಶ್ವನಾಥ ರೈ ಮಾನ್ಯ ಮತ್ತು ಬಳಗದವರಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ, ಸಂಜೆ ಗಂಗಾಧರ ಮಾರಾರ್ ಮತ್ತು ಬಳಗ ನೀಲೇಶ್ವರ ಇವರಿಂದ ತಾಯಂಬಕ, 6.30ಕ್ಕೆ ಮಾನ್ಯ ಶ್ರೀ ವೆಂಕಟ್ರಮಣ ದೇವಸ್ಥಾನದಿಂದ ಚುಕ್ಕಿನಡ್ಕ ಮಂದಿರಕ್ಕೆ ಉಲ್ಪೆ ಮೆರವಣಿಗೆ ಹೊರಡುವುದು, 6.30ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ 10.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, 11.30ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

