ಮಧೂರು: ಪಿಂಚಣಿದಾರರ ಸಂಘದ ಮಧೂರು ಪಂಚಾಯತಿ ಘಟಕದ ವತಿಯಿಂದ ಬುಧವಾರ ಪಿಂಚಣಿದಾರರ ದಿನವನ್ನು ಆಚರಿಸಲಾಯಿತು. ಘಟಕದ ಹಿರಿಯ ಸದಸ್ಯ ಹಾಗೂ ಗೌರವಾಧ್ಯಕ್ಷ ಕಕ್ಕೆಪಾಡಿ ವಿಷ್ಣು ಭಟ್ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಘಟಕದ ಅಧ್ಯಕ್ಷ ಶಿವ ನಾಯ್ಕ್ ವಿಷಯ ಮಂಡಿಸಿದರು. ಬಲರಾಮ ಭಟ್ ಸನ್ಮಾನಿತ ಕಕ್ಕೆಪಾಡಿ ವಿಷ್ಣು ಭಟ್ ಅವರನ್ನು ಪರಿಚಯ ನೀಡಿದರು. ಗೌರವಾಧ್ಯಕ್ಷ ನಾರಾಯಣಯ್ಯ ಸನ್ಮಾನಿತರ ಬದುಕು-ಉದ್ಯೋಗದ ಬಗ್ಗೆ ವಿವರಿಸಿದರು. ಸದಸ್ಯರಾದ ಶಿವರಾಮ ಶೆಟ್ಟಿ, ಕೃಷ್ಣ ನಡವಂತಿಲ್ಲಾಯ, ಬಾಲಕೃಷ್ಣ ಉಳಿಯ, ಕೇಶವ ಭಟ್ ಶುಭಹಾರೈಸಿದರು. ಶಿವ ನಾಯ್ಕ್ ವಿಷ್ಣು ಭಟ್ ದಂಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಶಾಂತಕುಮಾರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಘಟಕದ ಕಾರ್ಯದರ್ಶಿ ನೂತನ ಕುಮಾರಿ ಸ್ವಾಗತಿಸಿ, ಶಶಿಕಲಾ ಟೀಚರ್ ವಂದಿಸಿದರು.

.jpg)
