ತಿರುವನಂತಪುರಂ: 64ನೇ ಕೇರಳ ಶಾಲಾ ಕಲೋತ್ಸವದ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಮತ್ತು ಕಂದಾಯ ಸಚಿವ ಕೆ. ರಾಜನ್ ಬಿಡುಗಡೆ ಮಾಡಿದರು.
ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಜನವರಿ 14 ರಿಂದ 18, 2026 ರವರೆಗೆ ತ್ರಿಶೂರ್‍ನಲ್ಲಿ ನಡೆಯಲಿದೆ. ತೆಕ್ಕಿನ್ಕಾಡು ಮೈದಾನವು ಮುಖ್ಯ ಸ್ಥಳವಾಗಿರುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನವರಿ 14 ರಂದು ಬೆಳಿಗ್ಗೆ 10.00 ಗಂಟೆಗೆ ತೆಕ್ಕಿನ್ಕಾಡು ಮೈದಾನದಲ್ಲಿ ಮಕ್ಕಳ ಕಲಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಜನವರಿ 18 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮೋಹನ್ ಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅರಮನೆ ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಸಂಸ್ಕøತ ಹಾಗೂ ಅರೇಬಿಕ್ ಕಲೋತ್ಸವವೂ ನಡೆಯಲಿದೆ ಎಂದು ಸಚಿವರು ವಿವರಿಸಿದರು. ಇದರೊಂದಿಗೆ ಕಳೆದ ವರ್ಷದ ಶಾಲಾ ಕಲೋತ್ಸವದ ಮಾಧ್ಯಮ ಪ್ರಶಸ್ತಿಗಳನ್ನು ಸಹ ಘೋಷಿಸಲಾಯಿತು. ಏಷ್ಯಾನೆಟ್ ನ್ಯೂಸ್ ಸಮಗ್ರ ವರದಿಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

