ಕಾಸರಗೋಡು: 64ನೇ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಶೋಭಾಯಾತ್ರೆ ಇಂದು ಸಂಜೆ ೪ ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಮೊಗ್ರಾಲ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಪ್ತಿಗೊಳ್ಳಲಿದೆ. ಕಲೋತ್ಸವವನ್ನು ಗ್ರೀನ್ ಪ್ರೊಟೋಕಾಲ್ ಪಾಲಿಸಿ ನಡೆಸಲು ಸಮಿತಿ ಕಾರ್ಯಾಚರಣೆ ನಡೆಸುತ್ತಿದೆ. ಇದರಂಗವಾಗಿ ತೆಂಗಿನ ಮಡಲು ಹೆಣೆಯುವ ಸ್ಪರ್ಧೆ, ಗ್ರೀನ್ ವಾಲೆಂಟಿಯರ್ಗಳಿಗೆ ತರಗತಿಗಳನ್ನು ಹಮ್ಮಿಕೊಳ್ಳಲಾಯಿತು. ಶುಚಿತ್ವ ಮಿಷನ್ ಜಿಲ್ಲಾ ಕೋ-ಆರ್ಡಿನೇಟರ್ ಪಿ. ಜಯನ್, ಪ್ರೋಗ್ರಾಂ ಆಫೀಸರ್ ರಂಜಿತ್ ಕೆ.ವಿ, ಶುಚಿತ್ವ ಮಿಷನ್ ರಿಸೋರ್ಸ್ ಪರ್ಸನ್ ರಂಜಿನಿ ಕಾರಡ್ಕ ತರಗತಿಗೆ ನೇತೃತ್ವ ನೀಡಿದರು. ಹಲವರು ಭಾಗವಹಿಸಿದರು. ಕಲೋತ್ಸವವನ್ನು ಯಶಸ್ವಿಗೊಳಿಸಲು ಈಗಾಗಲೇ ಸಿದ್ಧತೆ ಆರಂಭಗೊಂಡಿದ್ದು, ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

