ಬದಿಯಡ್ಕ: ನಾಲಂದ ಮಹಾವಿದ್ಯಾಲಯದ 2025- 26 ನೇ ಸಾಲಿನ ಎನ್.ಎಸ್.ಎಸ್(ರಾಷ್ಟ್ರೀಯ ಸೇವಾ ಯೋಜನೆ) ವಾರ್ಷಿಕ ಶಿಬಿರ ಏತಡ್ಕ ಶಾಲೆಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು. ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಸತೀಶ್ಚಂದ್ರ ಭಂಡಾರಿ ಕೋಳಾರು ಸಪ್ತದಿನ ಶಿಬಿರವನ್ನು ಉದ್ಘಾಟಿಸಿ ಸಮಾಜಸೇವೆಯಿಂದ ವಿದ್ಯಾರ್ಥಿಗಳಿಗೆ ಸಮಾಜದೊಂದಿಗೆ ಬೆರೆಯಲು ಒಂದು ಅವಕಾಶ ಎಂದು ಹೇಳಿದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯ ಶಂ.ನಾ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಏತಡ್ಕ ವಾರ್ಡ್ ಸದಸ್ಯರು ಮತ್ತು ಶಿಬಿರದ ಸಂಘಟಕ ಸಮಿತಿಯ ಕನ್ವೀನರ್ ನಯನ ಪಿ, ಏತಡ್ಕ ಶಾಲಾ ಪ್ರಬಂಧಕ ಶ್ರೀಧರ್, ಮುಖ್ಯೋಪಾಧ್ಯಾಯ ರಾಜಾರಾಮ ಕುಂಜಾರು, ಏತಡ್ಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಮಿತ್ ರಾಜ್, ನಾಲಂದ ಮಹಾವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗೇಶ್ ನಾಯ್ಕ್, ಶಿಬಿರದ ಸಂಘಟಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆ.ಕೆ, ಶಾಲೆಯ ಎಂಪಿಟಿಎ ಅಧ್ಯಕ್ಷೆ ಅನ್ನಪೂರ್ಣ ಎಸ್. ಭಟ್, ವಿವಿಧ ಕುಟುಂಬಶ್ರೀಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಎನ್.ಎಸ್.ಎಸ್. ಮಾಜಿ ಕಾರ್ಯದರ್ಶಿ ರೋಬಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಅನುಜ್ಞ ವಂದಿಸಿದರು.

.jpg)
.jpg)
