ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲಾ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆರಂಭಗೊಂಡಿತು.
ಬೆಳಿಗ್ಗೆ 9.30ಕ್ಕೆ ಬಾಳೆಮೂಲೆ ಶಾಲಾ ಮುಖ್ಯೋಪಾಧ್ಯಾಯ ರಾಜೇಶ ಬಿ.ಧ್ವಜಾರೋಹಣಗೈಯ್ದು ಚಾಲನೆ ನೀಡಿದರು. 10.30ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿ ಒಂದು ವಾರಗಳ ಕಾಲ ನಡೆಯುವ ಶಿಬಿರ ಅರ್ಥಪೂರ್ಣವಾಗಿ ಶಿಬಿರಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರಲಿ. ಪರೋಪಕಾರ, ಸಹಬಾಳ್ವೆಯ ಪಾಠ ಜೀವನದಾದ್ಯಂತ ಇಲ್ಲಿಂದ ಆರಂಭಗೊಳ್ಳಲಿ ಎಂದರು.
ಗ್ರಾ.ಪಂ.ಸದಸ್ಯ ವೈ ಸುಧಾಕರ ಮಾಸ್ತರ್ ಉದ್ಘಾಟಿಸಿ ಹಾರೈಸಿದರು. ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಬಿ.ಎಸ್.ಗಾಂಭೀರ್, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಗ್ರಾಮ, ಬ್ಲಾಕ್, ಜಿಲ್ಲಾ ಪಂಚಾಯತಿಗಳ ಸದಸ್ಯರು ವಿವಿಧ ವಲಯದ ಪ್ರಮುಖರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಕೆ., ಯೋಜನಾಧಿಕಾರಿ ವಾಣಿ ಕೆ. ಮೊದಲಾದವರು ನೇತೃತ್ವ ವಹಿಸಿದ್ದರು. ಬಳಿಕ ಶಿಬಿರಾರ್ಥಿಗಳಿಗೆ ತರಬೇತಿ, ಸಮಾಜ ಕಾರ್ಯಕ್ರಮ, ಸಾಂಸ್ಕøತಿಕ-ಕ್ರೀಡಾ ಚಟುವಟಿಕೆಗಳು ಆರಂಭಗೊಂಡವು. ಜ.1 ರಂದು ಅಪರಾಹ್ನ ಶಿಬಿರ ಸಮಾರೋಪ ನಡೆಯಲಿದೆ.
ಶಿಬಿರದಲ್ಲಿ ಪ್ರಮುಖವಾಗಿ ಅಮಲು ಪದಾರ್ಥ ವಿರೋಧಿ ಜನಜಾಗೃತಿ, ಬೀಜಕ್ಕೆ ಕೈಜೋಡಿಸೋಣ-ಮಣ್ಣು ಹಾಗೂ ಮನುಷ್ಯರು, ಗ್ರಾಮಪಥ, ಜಾಗೃತಿ ಕವಚ, ಸ್ನೇಹಗಾನ ಮೊದಲಾದ ಗಮನಾರ್ಹ ಕಾರ್ಯಕ್ರಮಗಳು ನಡೆಯುತ್ತಿವೆ.

.jpg)
.jpg)
