ಮಂಜೇಶ್ವರ: ಮುಡಿಮಾರು ಶ್ರೀ ಮಲರಾಯ ಗುಳಿಗ ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಜರುಗಿತು. ಅಂದು ಬೆಳಿಗ್ಗೆ ಬಡಾಜೆಬೂಡು ತಂತ್ರವರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಮಲರಾಯ ನೇಮೋತ್ಸವ, ಗುಳಿಗ ಕೋಲ, ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ವೇದಿಕೆಯಲ್ಲಿ ಸ್ಥಳಿಯ ಮಕ್ಕಳಿಂದ ವಿವಿಧ ನೃತ್ಯಾವಳಿ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶಿವ ಕೃಪ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಗಳಾಗಿ ಪೆÇಯ್ಯೆ ಶ್ರೀಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಮಲರಾಯ ಕ್ಷೇತ್ರದ ಮುಖ್ಯ ಅರ್ಚಕರಾದ ಚಂದ್ರಹಾಸ ಪೂಜಾರಿ ಮುಡಿಮಾರು, ಅರಿಬೈಲು ಬರುವ ಶ್ರೀ ಧೂಮಾವತಿ ದೈವಸ್ಥಾನದ ದರ್ಶನ ಪಾತ್ರಿ ಅರಸ ಪೂಜಾರಿ ಕುದುಕೋರಿ, ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಮುಡಿಮಾರ್ ಘಟಕ ಅಧ್ಯಕ್ಷ ಚಂದ್ರಹಾಸ ಕೆದುಂಬಾಡಿ ಉಪಸ್ಥಿತರಿದ್ದರು.
ಗಡಿನಾಡ ಕಲಾ ನಿಧಿ ಶಾರದಾ ಆಟ್ರ್ಸ್ ಮತ್ತು ಐಸಿರಿ ತಂಡದ ಸಾರಥಿ ಕೃಷ್ಣ .ಜಿ. ಮಂಜೇಶ್ವರ ,ಸು ಫ್ರಂ ಸೋ ಚಲನಚಿತ್ರದ ಭಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಜೂನಿಯರ್ ರಾಷ್ಟ್ರೀಯ ಕಬಡ್ಡಿ ತಂಡ ಕರ್ನಾಟಕ ಇದರ ಸದಸ್ಯ ಸುಮುಖ್ ತಚ್ಚಾನಿ ತಲಪಾಡಿ ಅವರನ್ನು ಸನ್ಮಾನಿಸಲಾಯಿತು. ರವಿ ಮುಡಿಮಾರು ಸ್ವಾಗತಿಸಿದರು. ಮಾಧವ ಪೂಜಾರಿ ವಂದಿಸಿದರು .ನಂತರ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಇದರ ಪ್ರಯೋಜಕತ್ವದಲ್ಲಿ ಈ ವರ್ಷ ಜಯಭೇರಿ ಬಾರಿಸಿದ ಶಾರದ ಆಟ್ರ್ಸ್ ಐಸಿರಿ ತಂಡದವರಿಂದ "ಜೈ ಭಜರಂಗಬಲಿ " ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.


