ಕುಂಬಳೆ: ಕುಂಬಳೆಯ ಸ್ವರ್ಣ ವ್ಯಾಪಾರಿ, ದಿ. ಮಮ್ಮಿಞÂ ಹಾಜಿ ಎಂಬವರ ಮನೆ ಬಾಗಿಲು ಒಡೆದು ನುಗ್ಗಿದ ಕಳ್ಳರು ಎರಡು ಕಪಾಟಿನ ಬಾಗಿಲು ಒಡೆದು, ಬಟ್ಟೆ ಚಲ್ಲಾಪಿಲ್ಲಿಗೊಳಿಸಿ ಕಪಾಟಿನಲ್ಲಿದ್ದ ಎರಡು ಬೆಲೆಬಾಳುವ ವಾಚುಗಳನ್ನು ಕಳವುಗೈಯಲಾಗಿದೆ. ಮಮ್ಮಿಞÂ ಹಾಜಿ ಅವರ ಪತ್ನಿ ಮತ್ತು ಮನೆಯವರು ಚೆಂಗಳದ ಮನೆಯೊಂದರಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳಿದ್ದು, ರಾತ್ರಿ ವಾಪಸಾಗುವ ಮಧ್ಯೆ ಕಳವು ಬೆಳಕಿಗೆ ಬಂದಿದೆ. ಕುಂಬಳೆ ಪೇಟೆಯಲ್ಲಿನ ಕುಂಟಂಗೇರಡ್ಕದ ರಮೇಶ್ ನಾಯ್ಕ್ ಎಂಬವರ ಸ್ಟೇಶನರಿ ಅಂಗಡಿ ಬಾಗಿಲು ಒಡೆದು ನುಗ್ಗಿದ ಕಳ್ಳರು ಆರು ಸಾವಿರ ರೂ. ನಗದು ಕಳವುಗೈದಿದ್ದಾರೆ. ಎರಡೂ ಕಡೆ ನಡೆದಿರುವ ಕಳವು ಪ್ರಕರಣದ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

