ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ನೂತನ ಚುನಾಯಿತ ಪ್ರತಿನಿಧಿಗಳು ಭಾನುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕುಂಬ್ಡಾಜೆ ಪಂಚಾಯಿತಿ ಚುನಾವಣಾ?ಕಾರಿಯೂ ಜಿಲ್ಲಾ ಸಹಾಯಕ ಅಭಿವೃದ್ಧಿ ಅ?ಕಾರಿ ಮಿನಿ ಪಿ ಅವರು ಹಿರಿಯ ಸದಸ್ಯರಾದ ಅಬೂಬಕರ್ ಅವರಿಗೆ ಮೊದಲು ಪ್ರಮಾಣ ವಚನ ಬೋಧಿಸಿದರು.
ಬಳಿಕ ಮುನಿಯೂರು ವಾರ್ಡಿನ ಸದಸ್ಯ ಮಹೇಶ್ ಅಜ್ಜಿಮೂಲೆ, ಅನ್ನಡ್ಕ ವಾರ್ಡಿನಿಂದ ಆಯ್ಕೆಯಾದ ಬಿ.ಟಿ.ಅಬ್ದುಲ್ಲ ಕುಂಞÂ್ಞ, ಕುಂಬ್ಡಾಜೆ ವಾರ್ಡಿನಿಂದ ಆಯ್ಕೆಯಾದ ಮೊಹಮ್ಮದ್‍ಕುಂಞÂ್ಞ ಎಸ್., ಯೇತಡ್ಕ ವಾರ್ಡಿನಿಂದ ಆಯ್ಕೆಯಾದ ನಯನ, ಚಿರುಣಿ ವಾರ್ಡಿನಿಂದ ಆಯ್ಕೆಯಾದ ನೂರುದ್ದೀನ್ ಪಿ. ಬೆಳಿಂಜ, ಬೆಳಿಂಜ ವಾರ್ಡಿನಿಂದ ಆಯ್ಕೆಯಾದ ಗೀತಾ ಡಿ., ಗಾಡಿಗುಡ್ಡೆ ವಾರ್ಡಿನಿಂದ ಆಯ್ಕೆಯಾದ ಯಶೋಧ ಎನ್., ವಡಂಬಳೆ ವಾರ್ಡಿನಿಂದ ಆಯ್ಕೆಯಾದ ಕೊರಗಪ್ಪ ಬೆಳ್ಳಿಗೆ, ಮವ್ವಾರು ವಾರ್ಡಿನಿಂದ ಆಯ್ಕೆಯಾದ ರವೀಂದ್ರ ರೈ ಗೋಸಾಡ, ಗೋಸಾಡ ವಾರ್ಡಿನಿಂದ ಆಯ್ಕೆಯಾದ ಬಬಿತಾ ರೇಷ್ಮ, ಜಯನಗರ ವಾರ್ಡಿನಿಂದ ಆಯ್ಕೆಯಾದ ಸೌಭಾಗ್ಯಲಕ್ಷ್ಮೀ ಕೆ., ಅಗಲ್ಪಾಡಿ ವಾರ್ಡಿನಿಂದ ಆಯ್ಕೆಯಾದ ಪ್ರಿಯಾಂಕ ಎ.ಸಿ., ಹಾಗೂ ಉಬ್ರಂಗಳ ವಾರ್ಡಿನಿಂದ ಆಯ್ಕೆಯಾದ ಆಯಿಷತ್ ಮಾಸೀದಾ ಪಿ. ಹಿರಿಯ ಸದಸ್ಯ ಅಬೂಬಕರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ನೇತಾರರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು. ಪ್ರಮಾಣ ವಚನದ ಬಳಿಕ ಮೊದಲ ಸಮಿತಿ ಸಭೆ ನಡೆಯಿತು. ಸಮಾರಂಭದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿನಾಸ್ ನಾಸರ್ ಸ್ವಾಗತಿಸಿದರು.
ಡಿ.27ರಂದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯೂ, ಬಳಿಕ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಆಯ್ಕೆ ನಡೆಯಲಿದೆ.

.jpg)
