ಕುಂಬಳೆ: ತ್ಯಾಗ, ಸಮಾಧಾನ, ಸಹಬಾಳ್ವೆಯನ್ನು ಸಾರುವ ಹಬ್ಬ ಕ್ರಿಸ್ ಮಸ್ ಪ್ರತಿಯೊಬ್ಬ ವ್ಯಕ್ತಿಗೂ ನೆಮ್ಮದಿ ತರಲಿ. ಶಾಂತಿ ಸಮಾಧಾನಗಳೇ ಮಾನವೀಯತೆಯ ಬಹುದೊಡ್ಡ ಮೌಲ್ಯ ಎಂದು ಬೇಳ ಶೋಕಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳೂ, ಕಾಸರಗೋಡು ವಲಯ ಧರ್ಮಾಧ್ಯಕ್ಷರಾದ ಫಾ.ಸ್ಟ್ಯಾನಿ ಫಿರೇರಾ ಅಭಿಪ್ರಾಯ ವ್ಯಕ್ತಪಡಿಸಿದರು.
ಬೇಳ ವ್ಯಾಪ್ತಿಯ ಕ್ರೈಸ್ಟ್ ರಾಜ ವಾಳೆ ಹಾಗೂ ಸೀತಾಂಗೋಳಿಯ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಶನಿವಾರ ಸಂಜೆ ಸೀತಾಂಗೋಳಿ ಪೇಟೆಯಲ್ಲಿ ನಡೆದ ಕ್ರಿಸ್ ಮಸ್ ಸೌಹಾರ್ಧ ಸಂಗಮದಲ್ಲಿ ಅವರು ಪ್ರಧಾನ ಭಾಷಣಗೈದು ಮಾತನಾಡಿದರು.
ಸನ್ಮನಸ್ಸಿನವರಿಗೆ ಶಾಂತಿ ಲಭಿಸುತ್ತದೆ. ಸನ್ಮನಸ್ಸಿನ ಪ್ರಾಪ್ತಿಗೆ ಎಲ್ಲರೂ ಸೌಹಾರ್ಧಯುವಾಗಿ ಬಾಳುವುದು ಮಹತ್ವದ್ದಾಗುತ್ತದೆ. ಪರಸ್ಪರ ಕಾಳಜಿ, ಸ್ನೇಹಗಳಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇದುವೇ ಕ್ರಿಸ್ತನ ನಿಜ ಸಂದೇಶ ಎಂದವರು ಉಲ್ಲೇಖಿಸಿದರು. ನಾಲ್ಕನೇ ಶತಮಾನದಲ್ಲಿ ಜೀವಿಸಿದ್ದ ಸಂತ ಕ್ಸೇವಿಯರ್ ಅವರಿಗೆ ದೀನರ ಬಗ್ಗೆ ಇದ್ದ ಕಾಳಜಿ ಅತ್ಯಪೂರ್ವವಾದುದು. ಅವರ ಸ್ಮರಣಾರ್ಥ ರಚಿಸುವ ಸಾಂತಾಕ್ಲಾಸ್ ಕೇವಲ ತಮಾಷೆಯ ವಸ್ತುವಲ್ಲ. ಜವಾಬ್ದಾರಿಯುತವಾಗಿ ಅದು ಸಂದೇಶ ನೀಡುತ್ತದೆ ಎಮದು ತಿಳಿಸಿದರು.
ಗ್ರಾ.ಪಂ.ಸದಸ್ಯ ಇ.ಕೆ.ಮುಹಮ್ಮದ್ ಕುಂಞÂ, ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ ಶುಭಹಾರೈಸಿದರು. ಬೇಳ-ಸೀತಾಂಗೋಳಿ ವಾಳೆಯ ಅಧ್ಯಕ್ಷ ಕ್ಸೇವಿರ್ ಕ್ರಾಸ್ತಾ, ಉದ್ಯಮಿ ನವೀನ್, ಮಥಾಯಸ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಾಳೆಯ ಸದಸ್ಯರಿಂದ ಕ್ರೈಸ್ತನ ಸಂದೇಶಗಳ ಗಾಯನ(ಕ್ಯಾರೆಲ್ಸ್) ಹಾಡಿದರು. ವಕೀಲ ಥಾಮಸ್ ಡಿಸೋಜ ಸ್ವಾಗತಿಸಿ,ನಿರೂಪಿಸಿದರು. ಮಹಾಲಿಂಗ ಕಾವೇರಿಕಾನ ವಂದಿಸಿದರು. ಕ್ರಿಸ್ ಮಸ್ ಪ್ರಯುಕ್ತ ಕೇಕ್ ಕತ್ತರಿಸಿ ಹಂಚಲಾಯಿತು. ಇದಕ್ಕೂ ಮೊದಲು ಪೇಟೆಯಲ್ಲಿ ಮೆರವಣಿಗೆ ನಡೆಯಿತು.

.jpg)
.jpg)
.jpg)
