ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಬಟ್ಟಂಬಾರೆ ನಿವಾಸಿ ಬಡಕುಟುಂಬದ ರೋಬರ್ಟ್ ಮನೆಯವರಿಗೆ ಕ್ರಿಸ್ ಮಸ್ ಅಂಗವಾಗಿ ಆಹಾರ ಸಾಮಗ್ರಿಒಳಗೊಮಡ ಕಿಟ್ ವಿತರಿಸಲಾಯಿತು.
ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ಹಿರಿಯ ಛಾಯಾಗ್ರಾಹಕ ಮೈಂದಪ್ಪ ಅವರು ಆಹಾರ ಸಾಮಾಗ್ರಿಗಳ ಕಿಟ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಯೂನಿಟ್ ಅಧ್ಯಕ್ಷ ವಸಂತ ಕೆರಮನೆ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಜತೆ ಕಾರ್ಯದರ್ಶಿ ಗಣೇಶ್ ರೈ, ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್, ಯೂನಿಟ್ ನಿರೀಕ್ಷಕ ಅಜಿತ್ ಸಿಗ್ನೇಚರ್ ಉಪಸ್ಥಿತರಿದ್ದರು.


