ಮಂಜೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಮಂಜೇಶ್ವರ ತಾಲೂಕುಸಮಿತಿ ಶೌರ್ಯ ವಿಪತ್ತು ಮತ್ತು ನಿರ್ವಹಣಾ ಘಟಕ ಸುಂಕದಕಟ್ಟೆ ವಲಯ ಹಾಗೂ ದೇರಳಕಟ್ಟೆ ಯೇನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಸಣಾ ಶಿಬಿರ ಡಿ. 21ರಂದುಬೆಳಗ್ಗೆ 8ಕ್ಕೆ ವರ್ಕಾಡಿಕಳಿಯೂರು ಸಂತ ಜೋಸೆಫರರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.
ಅಖಿಲಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸುವರು. ವರ್ಕಾಡಿ ಇಗರ್ಜಿ ಧರ್ಮಗುರು ವಂದನೀಯ ಬಾಸಿಲ್ ವಾಜ್ ಆಶೀರ್ವಚನ ನೀಡುವರು.ವಲಯ ಒಕ್ಕುಟ ಅಧ್ಯಕ್ಷ ಸೋಮಶೇಖರ ಸುವರ್ಣ ಅಧ್ಯಕ್ಷತೆ ವಹಿಸುವರು.

