ಕಾಸರಗೋಡು: ತಲಶ್ಶೇರಿ ಪ್ರೆಸ್ ಫಾರಂ, ಮೇರಿಮಾತಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸ್ಥಾಪಿಸಿರುವ 18ನೇ ಡಾ. ಹರ್ಮನ್ ಗುಂಡರ್ಟ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಮಾತೃಭೂಮಿ ಕಾಸರಗೋಡು ವರದಿಗಾರ ಹಾಗೂ ಕಾಸರಗೋಡು ಪ್ರೆಸ್ಕ್ಲಬ್ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ಅವರು ಆಯ್ಕೆಯಾಗಿದ್ದಾರೆ.
ಜೂನ್ 20 ರಂದು ಮಾತೃಭೂಮಿಯಲ್ಲಿ ಪ್ರಕಟವಾದ 'ರಾಷ್ಟ್ರೀಯ ಹೆದ್ದಾರಿಗಾಗಿ ಮನೆ ಅಡಿಪಾಯದ ವರೆಗೂ ಜೆಸಿಬಿ ಅಗೆತ-ಮಲಗಲು ಸ್ಥಳ ಹುಡುಕುತ್ತಿರುವ ಕಮಲಾ ಕುಟುಂಬ'ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.
ಅನೀಶ್ ಪಾತಿರಿಯಾಡ್, ಪಿ.ದಿನೇಶನ್, ಮತ್ತು ಎನ್.ಸಿರಾಜುದ್ದೀನ್ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪ್ರಕಟಿಸಿದೆ. ಪ್ರಶಸ್ತಿ 10,001 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಜನವರಿ 5ರಂದು ತಲಶ್ಯೇರಿ ಪ್ರೆಸ್ ಫೆÇೀರಂ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಸದ ಪಿ. ಸಂತೋಷ್ ಪ್ರಶಸ್ತಿಪ್ರದಾನ ಮಾಡಲಿದ್ದಾರೆ.


