ಬದಿಯಡ್ಕ: ಕಾಸರಗೋಡಿನ ಹಿರಿಯ ಸಂಗೀತ ವಿದ್ವಾಂಸರಾಗಿದ್ದು ಶಿಷ್ಯವಲಯವನ್ನು ವಿಸ್ತರಿಸಿದ್ದ ದಿ. ಗೋಪಾಲಕೃಷ್ನ ಮನೋಳಿತ್ತಾಯರ ಸಂಸ್ಮರಣ ಸಮಿತಿ ಆಶ್ರಯದಲ್ಲಿ ಹತ್ತನೇ ವರ್ಷದ ಸಂಗೀತಾರಾಧನೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಡಿ. 24-25 ರಂದು ಅಪರಾಹ್ನ 3 ರಿಂದ ನಡೆಯಲಿದೆ. ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ ಉದ್ಘಾಟಿಸುವರು. ಬಳಿಕ ಮನೋಳಿತ್ತಾಯರ ಶಿಷ್ಯರು ಮತ್ತು ಅಭಿಮಾನಿ ಬಳಗದಿಂದ ಸಂಗೀತಾರಾಧನೆ ನಡೆಯಲಿದೆ.
ಡಿ.25 ರಂದು ಅಪರಾಹ್ನ 2.30 ರಿಂದ ಸಂಸ್ಮರಣ ಕಾರ್ಯಕ್ರಮ ಜರಗಲಿದ್ದು ವಿಶಾಲ ಪ್ರಭ ಅಧ್ಯಕ್ಷತೆ ವಹಿಸುವರು. ವಿದ್ವಾನ್ ಪ್ರಭಾಕರ ಕುಂಜಾರು ಸಂಸ್ಮರಣ ನುಡಿಗಳನ್ನಾಡುವರು. ವಿದುಷಿ ವಿಜಯ ಪ್ರಕಾಶ್ ಬೆದ್ರಡಿ, ಮುಖ್ಯೋಪಾಧ್ಯಾಯಿನಿ ಮಾಲತಿ ವೈ ಶುಭಹಾರೈಸುವರು. ಅಪರಾಹ್ನ 3 ರಿಂದ ಲೀಲಾವತಿ ಭಟ್ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ಸಂಗೀತ ಕಛೇರಿ ನಡೆಯಲಿದೆ. ಹಾಡುಗಾರಿಕೆಯಲ್ಲಿ ಕಾಇಂಗಾಡ್ ಟಿ.ಪಿ. ಶ್ರೀನಿವಾಸನ್, ನವನೀತ್ ಕೃಷ್ಣನ್ ಎಸ್(ಪಿಟೀಲು), ವಸಂತಕೃಷ್ಣ ಕಾಂಚನ(ಮೃದಂಗ), ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ(ಮೋರ್ಸಿಂಗ್)ನಲ್ಲಿ ಭಾಗವಹಿಸುವರು.

.jpg)
