ಕಾಸರಗೋಡು: ಪ್ರೆಸ್ ಕ್ಲಬ್‍ನಲ್ಲಿ ದೀರ್ಘಕಾಲದ ವರೆಗೆ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ, ಹಿರಿಯ ಪತ್ರಕರ್ತ ಕೆ.ಎಂ. ಅಹ್ಮದ್ ಅವರ ಸ್ಮರಣಾರ್ಥ ಕಾಸರಗೋಡು ಪ್ರೆಸ್ ಕ್ಲಬ್ ಸ್ಥಾಪಿಸಿದ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಯನ್ನು ಕೆ.ಎಂ. ಅಹ್ಮದ್ ಫೌಂಡೇಶನ್ ಸಹಯೋಗದೊಂದಿಗೆ ನೀಡಲಾಗುತ್ತಿದ್ದು, ಈ ಬಾರಿ, ಜನವರಿ 1 ರಿಂದ ಡಿಸೆಂಬರ್ 19, 2025 ರವರೆಗೆ ಪತ್ರಿಕೆಗಳಲ್ಲಿ ಪ್ರಕಟವಾದ ಅತ್ಯುತ್ತಮ ಗ್ರಾಮೀಣ ವರದಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. 15,000ನಗದು ಬಹುಮಾನ ಮತ್ತು ಸ್ಮರಣಿಕೆ ಒಳಗೊಂಡಿರುವ ಈ ಪ್ರಶಸ್ತಿಯನ್ನು ಜನವರಿ 10 ರಂದು ನಡೆಯುವ ಕೆ.ಎಂ. ಅಹ್ಮದ್ ಸಂಸ್ಮರಣಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ನಮೂದುಗಳನ್ನು ಡಿಸೆಂಬರ್ 27 ರೊಳಗೆ ಮೂಲ ಮತ್ತು ಸುದ್ದಿಯ ಮೂರು ಪ್ರತಿಗಳೊಂದಿಗೆ, ಸಂಸ್ಥೆಯ ಮುಖ್ಯಸ್ಥರು ಪ್ರಮಾಣೀಕರಿಸಿದ ಪತ್ರದೊಂದಿಗೆ ಸಲ್ಲಿಸಬೇಕು. ಕಾರ್ಯದರ್ಶಿ, ಕಾಸರಗೋಡು ಪ್ರೆಸ್ ಕ್ಲಬ್, ಸೇವಾ ಸಹಕಾರಿ ಬ್ಯಾಂಕ್ ಹತ್ತಿರ, ಹೊಸ ಬಸ್ ನಿಲ್ದಾಣ, ಕಾಸರಗೋಡು-671121 ಎಂಬ ವಿಳಾಸಕ್ಕೆ (ದೂರವಾಣಿ9446937037, 9447060138)ಸಲ್ಲಿಸುವಂತೆಪ್ರಕಟಣೆ ತಿಳಿಸಿದೆ.

