ಕುಂಬಳೆ: ಕಟ್ಟತ್ತಡ್ಕ ಮುಹಿಮ್ಮತ್‍ನಗರದಲ್ಲಿ ವಾಸಿಸುವ ಧಾರ್ಮಿಕ ಪಂಡಿತ ಅಬ್ದುಲ್ ಖಾದರ್ ಸಖಾಫಿ(54) ಉಪ್ಪಿನಂಗಡಿ ಆತೂರಿನಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆತೂರಿನ ಸಂಬಂಧಿಕರ ಮನೆಗೆ ತೆರಳಿದ್ದ ಅಬ್ದುಲ್ ಖಾದರ್ ಸಖಾಫಿ ಮಸೀದಿಗೆ ತೆರಳಲು ರಸ್ತೆ ಅಡ್ಡದಾಟುವ ಮಧ್ಯೆ ಪಿಕ್‍ಅಪ್ ವ್ಯಾನ್ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಕಟ್ಟತ್ತಡ್ಕ ಮುಹಿಮ್ಮತ್ ನಗರ ವಠಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

