ಕಾಸರಗೋಡು: ನಗರದ ನಮೋ ಫ್ಯಾನ್ಸ್ ಮಲ್ಲಿಕಾರ್ಜುನ ಇದರ ವತಿಯಿಂದ ಪ್ರತಿವರ್ಷ ನಡೆಯುವ ಮಂಡಲ ಪೂಜಾ ಕಾರ್ಯಕ್ರಮ ಶ್ರೀ ಧರ್ಮ ಶಾಸ್ತಾ ಭಜನಾ ಮಂದಿರದಲ್ಲಿ ಜರುಗಿತು. ಭಜನಾ ಸಂಕೀರ್ತನೆಯೊಂದಿಗೆ ನೂರಕ್ಕೂ ಅಧಿಕ ವಿಶೇಷ ಮಂಡಲಪೂಜೆ ನೆರವೇರಿತು.
ನಮೋ ಫ್ಯಾನ್ಸ್ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳಳ, ನಗರಸಭಾ ಮಾಜಿ ಸದಸ್ಯೆ ಲತಾ ಟೀಚರ್, ನಗರಸಭಾ ನೂತನ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಮಂದಿರದ ಸಮಿತಿ ಅಧ್ಯಕ್ಷ, ಉದ್ಯಮಿ ಸುರೇಶ್, ನಮೋ ಫ್ಯಾನ್ಸ್ ಪ್ರಮುಖರಾದ ಶಂಕರನಾರಾಯಣ ಹೊಳ್ಳ, ಶೀನಿವಾಸ ಹೊಳ್ಳ, ಪ್ರಮೋದ್ ಕುಮಾರ್, ಕಿಶೋರ್ ಕುಮಾರ್, ಪುರಂದರ ಶೆಟ್ಟಿ, ನಾಮದೇವ ಪೈ, ಶಿವಶಂಕರ ಅಡಿಗ, ನವೀನ್ ಅಶೋಕ ನಗರ, ರವಿ ಕೇಸರಿ, ಪ್ರೆಮ್‍ಜಿತ್, ತುಕರಾಮ ಕೆರೆಮನೆ, ರಾಮಕೃಷ್ಣ ರಾವ್, ತಿರುಮಲೇಶ್ ಹೊಳ್ಳ, ಶೇಷಾದ್ರಿ ಹೊಳ್ಳ ವಸಂತ ಕೆರೆಮನೆ, ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು2014ರಿಂದ ಅಧಿಕಾರಕ್ಕೇರಿ ಪ್ರಮಾಣವಚನ ಸ್ವೀಕರಿಸಿದ ದಿನಾಂಕದಂದು ನಮೋ ಫ್ಯಾನ್ಸ್ ವತಿಯಿಂದ ಪ್ರತಿವರ್ಷ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಜನೆ, ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.


