HEALTH TIPS

ಗೌತಮ್ ಅದಾನಿ ಬೆಳವಣಿಗೆ ಎಲ್ಲರಿಗೂ ಸ್ಫೂರ್ತಿ: ಶರದ್‌ ಪವಾರ್‌ ಬಣ್ಣನೆ

ಮುಂಬೈ: 'ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವರ ಬೆಳವಣಿಗೆಯು ಎಲ್ಲರಿಗೂ ಸ್ಫೂರ್ತಿದಾಯಕ' ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಬಣ್ಣಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅದಾನಿ ಅವರು, 'ಹಿರಿಯ ನಾಯಕ ಪವಾರ್‌ ಎಲ್ಲರಿಗೂ ಮಾರ್ಗದರ್ಶಕ' ಎಂದು ಹೊಗಳಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅದಾನಿ ವಿರುದ್ಧ ಆಕ್ರಮಣಕಾರಿ ದಾಳಿ ಮುಂದುವರಿಸುತ್ತಿರುವಾಗ, ಈ ಆತ್ಮೀಯ ಮಾತುಕತೆಯು ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್‌ ಹಾಗೂ ಎನ್‌ಸಿಪಿ (ಎಸ್‌ಪಿ) ನಡುವಿನ ಸಂಭಾವ್ಯ ಹೊಂದಾಣಿಕೆಯ ಬಗ್ಗೆ ಅನೇಕ ಊಹಾಪೋಹಗಳಿದ್ದು, ಈಗಿನ ಬೆಳವಣಿಗೆಯು ಮಹಾರಾಷ್ಟ್ರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಪವಾರ್‌ ಸ್ಥಾಪಿಸಿದ್ದ ವಿದ್ಯಾ ಪ್ರತಿಷ್ಠಾನದ ಭಾಗವಾದ 'ಶರದ್‌ ಪವಾರ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌'ನ ಹೊಸ ಸಂಕೀರ್ಣವನ್ನು ಉದ್ಘಾಟಿಸಲು ಅದಾನಿ ಅವರು ಪುಣೆ ಜಿಲ್ಲೆಯ ಬಾರಾಮತಿಗೆ ಭಾನುವಾರ ಭೇಟಿ ನೀಡಿದ್ದರು.

'ಗುಜರಾತ್‌ನ ಬರಪೀಡಿತ ಬನಸ್ಕಂತ ಜಿಲ್ಲೆಯವರಾದ ಅದಾನಿ ಅವರು ಇಂದು 23 ರಾಜ್ಯಗಳಲ್ಲಿ ವಿಶಾಲವಾದ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಅವರ ಈ ಪ್ರಯಾಣವು ದೊಡ್ಡ ಕನಸು ಕಾಣುವ ಯುವಕರಿಗೆ ಸ್ಫೂರ್ತಿಯಾಗಿದೆ' ಎಂದು ಪವಾರ್‌ ಬಣ್ಣಿಸಿದ್ದಾರೆ.

ಗೌತಮ್‌ ಅದಾನಿ ಮಾತನಾಡಿ, 'ಪವಾರ್‌ ಅವರೊಂದಿಗಿನ ಮೂರು ದಶಕಗಳ ಒಡನಾಟವು ನನ್ನ ಚಿಂತನೆಯನ್ನು ರೂಪಿಸಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ನಿಜವಾದ ಅರ್ಥದಲ್ಲಿ ಮಾರ್ಗದರ್ಶಕರಾಗಿದ್ದಾರೆ' ಎಂದು ಹೊಗಳಿದ್ದಾರೆ.

ಸುಪ್ರಿಯಾ ಸುಳೆ ಬಾರಾಮತಿ ಸಂಸದೆಅದಾನಿ ಮತ್ತು ಪವಾರ್‌ ಕುಟುಂಬಗಳ ನಡುವೆ ಕಳೆದ 30 ವರ್ಷಗಳಿಂದ ಉತ್ತಮ ಸಂಬಂಧವಿದೆ. ಅವರು ನನಗೆ ಅಣ್ಣನಂತೆ ಅವರ ಪತ್ನಿ ಪ್ರೀತಿ ಅದಾನಿ ಅವರು ಅತ್ತಿಗೆ ಇದ್ದಂತೆ 'ಶರದ್‌ ಪವಾರ್‌ ಮತ್ತು ಗೌತಮ್‌ ಅದಾನಿ ನಡುವಿನ ಸಂಬಂಧ ರಾಜಕೀಯಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿದೆ' ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಯ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ಹೇಳಿದ್ದಾರೆ. 'ಶರದ್‌ ಪವಾರ್‌ ಪಕ್ಷದ ವಿಭಜನೆಯಲ್ಲಿ ಅದಾನಿ ಸಹೋದರನ ಪಾತ್ರವಿದೆ ಎಂದು ನಾವು ಕೇಳಿದ್ದೇವೆ. ರೋಹಿತ್‌ ಪವಾರ್‌ ಅವರು ಅದಾನಿಯ ಕಾರನ್ನು ಏಕೆ ಚಲಾಯಿಸುತ್ತಿದ್ದರು' ಎಂದು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries