ಕಾಸರಗೋಡು: ಅಣಂಗೂರು ಶ್ರೀ ಶಾರದಾಂಬಾ ಭಜನಾಮಂದಿರದಲ್ಲಿ ವಾರ್ಷಿಕ ಏಕಾಹ ಭಜನೆ ಡಿ. 21ರಂದು ಜರುಗಲಿದೆ. ಬೆಳಗ್ಗೆ 5.30ಕ್ಕೆ ಗಣಪತಿ ಹವನ, ಸೂರ್ಯೋದಯಕ್ಕೆ ದೀಪ ಪ್ರತಿಷ್ಠೆಯೊಂದಿಗೆ ಭಜನೆ ಅರಂಭಗೊಳ್ಳುವುದು. ನಂತರ ವಿವಿಧ ಭಜನಾ ತಂಡಗಳಿಂದ ಭಜನೆ, ಮರುದಿನ ಸೂರ್ಯೋದಯಕ್ಕೆ ದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲ ನಡೆಯುವುದು.
ಪುನ:ಪ್ರತಿಷ್ಠಾ ವಾರ್ಷಿಕೋತ್ಸವ:
ಅಣಂಗೂರು ಶ್ರೀ ಶಾರದಾಂಬಾ ಭಜನಾಮಂದಿರದ ಪುನ:ಪ್ರತಿಷ್ಠಾ ವಾರ್ಷಿಕೋತ್ಸವ ಜನವರಿ 26ರಂದು ಜರುಗಲಿದೆ. ಅಂದು ಬೆಳಗ್ಗೆ 5.30ಕ್ಕೆ ಗಣಪತಿ ಹವನ, ನಾಗತಂಬಿಲ, 10.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8ಕ್ಕೆ ಭಜನೆ, ಮಹಾಪೂಜೆ ನಡೆಯುವುದು. ಫೆಬ್ರವರಿ 1ರಂದು ಕ್ಷೇತ್ರ ವಠಾರದಲ್ಲಿ ಗುಳಿಗ ಕೋಲ ನಡೆಯುವುದು.

