HEALTH TIPS

RSSಗೆ ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ, ಶತ್ರುವೂ ಇಲ್ಲ: ಮೋಹನ್ ಭಾಗವತ್

 ಕೋಲ್ಕತ್ತ: 'ನಮಗೆ ಯಾವುದೇ ರಾಜಕೀಯ ಕಾರ್ಯಸೂಚಿ ಆಗಲಿ ಅಥವಾ ಶತ್ರುವಾಗಲಿ ಇಲ್ಲ. ಆದರೆ, ಕೆಲವರು ದಾರಿತಪ್ಪಿಸುವ ಅಭಿಯಾನಗಳ ಮೂಲಕ ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದ್ದಾರೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.


ಆರ್‌ಎಸ್‌ಎಸ್‌ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, 'ಆರ್‌ಎಸ್‌ಎಸ್‌ಗೆ ಯಾವುದೇ ಶತ್ರುಗಳಿಲ್ಲ. ಆದರೆ, ಸಂಘ ಬೆಳೆದರೆ ಸಂಕುಚಿತ ಹಿತಾಸಕ್ತಿಯ ಕೆಲವು ಅಂಗಡಿಗಳು ಮುಚ್ಚಲ್ಪಡುತ್ತವೆ' ಎಂದಿದ್ದಾರೆ.

'ಒಬ್ಬ ವ್ಯಕ್ತಿಗೆ ಆರ್‌ಎಸ್‌ಎಸ್ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ, ಅಭಿಪ್ರಾಯ ಎಂಬುದು ವಾಸ್ತವವನ್ನು ಆಧರಿಸಿರಬೇಕೇ ಹೊರತು ಕೇವಲ ನಿರೂಪಣೆಗಳು ಮತ್ತು ದ್ವಿತೀಯ ಮೂಲದ ಮಾಹಿತಿಗಳನ್ನು ಆಧರಿಸಿರಬಾರದು' ಎಂದು ಅವರು ತಿಳಿಸಿದ್ದಾರೆ.

'ವಾಸ್ತವ ಸಂಗತಿಗಳನ್ನು ಜನರಿಗೆ ಅರ್ಥೈಸುವ ಸಲುವಾಗಿ ದೇಶದ ನಾಲ್ಕು ನಗರಗಳಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ನಮ್ಮ ಸಂಘಟನೆ (ಆರ್‌ಎಸ್‌ಎಸ್) ಯಾವುದೇ ರಾಜಕೀಯ ಕಾರ್ಯಸೂಚಿಯನ್ನು ಹೊಂದಿಲ್ಲ. ಬದಲಾಗಿ, ಹಿಂದೂ ಸಮಾಜದ ಸುಧಾರಣೆ ಮತ್ತು ರಕ್ಷಣೆಗಾಗಿ ಕೆಲಸ ಮಾಡುತ್ತದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಮ್ಮ ದೇಶವು ಮತ್ತೆ 'ವಿಶ್ವ ಗುರು' ಆಗಲಿದೆ. ಈ ಉದ್ದೇಶಕ್ಕಾಗಿಯೇ ನಮ್ಮ ಸಮಾಜವನ್ನು ಸಿದ್ಧಪಡಿಸುವುದು ಸಂಘದ ಕರ್ತವ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ ಶತಮಾನೋತ್ಸವದ ಅಂಗವಾಗಿ ಕೋಲ್ಕತ್ತ, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries