ಕಾಸರಗೋಡು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಶಿಕ್ಷಕ, ಕುಂಬಳೆ ಪೊಲೀಸ್ ಆಣೆ ವ್ಯಾಪ್ತಿಯ ಕಿದೂರು ಬಜಪ್ಪೆಕಡವು ಹೌಸ್ನ ಎ. ಅಬ್ದುಲ್ ಹಮೀದ್ಗೆ ಹೊಸದುರ್ಗ ಪೋಕ್ಸೋ ನ್ಯಾಯಾಲಯ 14ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 40ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಹದಿನೈದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ 12ರ ಹರೆಯದ ಬಾಲಕಿಗೆ 2023 ನವೆಂಬರ್ ತಿಂಗಳಲ್ಲಿ ಹಲವುಬಾರಿ ಮದ್ರಸಾ ಕೊಠಡಿಯೊಳಗೆ ಲೈಂಗಿಕ ಕಿರುಕುಳನೀಡಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.

