ಮಂಜೇಶ್ವರ: ರಾಜಸ್ಥಾನದಿಂದ ಆಡುಗಳನ್ನು ಪೂರೈಸುವುದಾಗಿ ಮಂಜೇಶ್ವರ ನಿವಾಸಿಯೊಬ್ಬರಿಂದ ಎಂಟುವರೆ ಲಕ್ಷ ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಅಜ್ಮೀರ್‍ನ ಪುಷ್ಕರ್‍ನಲ್ಲಿರುವ ಜಾನ್ಸ್ ಗೋಟ್ ಫಾರ್ಮ್‍ನ ಭಗವನ್ ಚೌಳಹನ್ಸ್ ರಾಜಿ ಎಂಬಾತನ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ರಾಜಸ್ಥಾನದಿಂದ ಆಡುಗಳನ್ನು ಪೂರೈಸುವುದಾಗಿ 2022 ನವೆಂಬರ್ 0ರಂದು, 2023 ಜ. 10ರಂದು ಹಾಗೂ 20ರಂದು ಒಟ್ಟು ಎಂಟುವರೆ ಲಕ್ಷ ರೂ. ಪಡೆದು, ಆಡುಗಳನ್ನೂ ಪೂರೈಸದೆ, ಹಣವನ್ನೂ ವಾಪಾಸುಮಾಡದೆ ವಂಚಿಸಿರುವುದಾಗಿ ಉದ್ಯಾವರ ಕೆಜೆಎಂ ಕ್ರಾಸ್ ರೋಡ್‍ನ ಬಂಗಾರಕುನ್ನು ನಿವಾಸಿ ಸಯ್ಯದ್ ತ್ವಾಹ ತಙಲ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

