ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಹೊಸ ಅಲೆಯ ದಾಳಿಗಳು ಅಪ್ಪಳಿಸಿದ ಕೆಲವೇ ಕ್ಷಣಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಪ್ಲಾಟ್ ಫಾರ್ಮ್ ನಲ್ಲಿ ಪ್ರಬಲ ಸ್ಫೋಟಗಳ ಸರಣಿಯನ್ನು ತೋರಿಸುವ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಸ್ಫೋಟಗಳು ಯಾವಾಗ ಅಥವಾ ಎಲ್ಲಿ ಸಂಭವಿಸಿದವು ಎಂಬುದರ ಬಗ್ಗೆ ಟ್ರಂಪ್ ಯಾವುದೇ ವಿವರ ನೀಡಿಲ್ಲ.
31 ಸೆಕೆಂಡುಗಳ ಈ ಕ್ಲಿಪ್ ನಲ್ಲಿ ಪರ್ವತ ಪ್ರದೇಶದಲ್ಲಿ ಸಂಭವಿಸಿದಂತೆ ಕಾಣುವ ಸ್ಫೋಟಗಳ ದೃಶ್ಯಗಳು ಗೋಚರಿಸುತ್ತವೆ. ಬೆಂಕಿಯ ದೊಡ್ಡ ಉಂಡೆಗಳು ಹಾಗೂ ದಟ್ಟ ಹೊಗೆಯ ಮೋಡಗಳ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.
ಇದೇ ವೇಳೆ, Aljazeera ಅರೇಬಿಕ್ ವರದಿ ಪ್ರಕಾರ, ಟೆಹ್ರಾನ್ ನ ವಿವಿಧ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ತಿಳಿದು ಬಂದಿದೆ.

