HEALTH TIPS

ಅಸ್ಸಾಂ ಬಿಜೆಪಿಗೆ ಶಾಕ್! ಕಾಂಗ್ರೆಸ್ ಸೇರಿದ ಸಚಿವೆ ನಂದಿತಾ ಗಾರ್ಲೋಸಾ

 ಗುವಾಹಟಿ: ಚುನಾವಣೆ ನಡೆಯುತ್ತಿರುವಾಗಲೇ ಆಡಳಿತಾರೂಢ ಬಿಜೆಪಿಗೆ ಬಂಡಾಯದ ಬಿಸಿ ತಾಗಿದ್ದು ಅಸ್ಸಾಂ ಸಚಿವೆ ನಂದಿತಾ ಗಾರ್ಲೋಸಾ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ನಂದಿತಾ ಗಾರ್ಲೋಸಾ ಅವರು ಭಾನುವಾರ ಸಂಜೆ ಕಾಂಗ್ರೆಸ್ ಸೇರಿರುವ ಫೋಟೊವನ್ನು ಅಸ್ಸಾಂ ಕಾಂಗ್ರೆಸ್ ಮಾಧ್ಯಮ ಘಟಕ ಹಂಚಿಕೊಂಡಿದೆ. 


ಹಿಮಂತ ಬಿಸ್ವ ಶರ್ಮಾ ಅವರ ಸರ್ಕಾರದಲ್ಲಿ ಇತ್ತೀಚೆಗಷ್ಟೇ ಯುವಜನ ಕಲ್ಯಾಣ ಇಲಾಖೆಯ ಸಚಿವೆಯಾಗಿದ್ದ ನಂದಿತಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ನಂದಿತಾ ಅವರು ಹಾಫ್‌ಲಾಂಗ್ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಆದರೆ, ಹಾಫ್‌ಲಾಂಗ್ ವಿಧಾನಸಭಾ ಕ್ಷೇತ್ರಕ್ಕೆ ಹೊಸಮುಖ ರೂಪಾಲಿ ತಾಂಗತ್ಸಾ ಅವರಿಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಮುನಿಸಿಕೊಂಡು ನಂದಿತಾ ಅವರು ಕಾಂಗ್ರೆಸ್ ಸೇರಿದ್ದಾರೆ. ಹಾಫ್‌ಲಾಂಗ್‌ನಲ್ಲಿ ಬಿಜೆಪಿಯ ರೂಪಾಲಿ ಅವರನ್ನು ನಂದಿತಾ ಎದುರಿಸಲಿದ್ದಾರೆ.

ನಂದಿತಾ ಅವರ ಮನವೊಲಿಕೆಗೆ ನಿನ್ನೆ ಹಾಫ್‌ಲಾಂಗ್‌ಗೆ ತೆರಳಿದ್ದ ಸಿಎಂ ಹಿಮಂತ್ ಅವರ ಪ್ರಯತ್ನ ಕೈಗೂಡಿಲ್ಲ. ಈ ಬೆಳವಣಿಗೆ ಬಗ್ಗೆ ಉಭಯ ನಾಯಕರು ಪ್ರತಿಕ್ರಿಯೆ ನೀಡಿಲ್ಲ.

126 ಸದಸ್ಯ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಮೇ 4 ರಂದು ಮತ ಎಣಿಕೆಯಾಗಲಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries