HEALTH TIPS

ಅಮೆರಿಕದಿಂದ ಹೆಚ್ಚುತ್ತಿರುವ ಒತ್ತಡ: 2,010 ಕೈದಿಗಳಿಗೆ ಕ್ಷಮಾದಾನ ನೀಡಿದ ಕ್ಯೂಬಾ

 ಹವಾನಾ: ಅಮೆರಿಕದಿಂದ ತೀವ್ರ ಒತ್ತಡ ಎದುರಿಸುತ್ತಿರುವ ಕ್ಯೂಬಾ ಸರ್ಕಾರವು, ವಿದೇಶಿಗರು ಸೇರಿದಂತೆ 2010 ಕೈದಿಗಳಿಗೆ ಶುಕ್ರವಾರ ಕ್ಷಮಾದಾನ ನೀಡಿದೆ. 


'ಗುಡ್‌ ಫ್ರೈಡೇ' ಅಂಗವಾಗಿ ಮಾನವೀಯ ನೆಲೆಯಲ್ಲಿ ಕ್ಷಮಾದಾನ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಅಮೆರಿಕದೊಂದಿಗೆ ಹೆಚ್ಚುತ್ತಿರುವ ಒತ್ತಡದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ಮಹಿಳೆಯರು ವೃದ್ಧರು ಮತ್ತು ಯುವಕರು ಸೇರಿದಂತೆ ದೇಶದ ನಿವಾಸಿಗಳನ್ನು, ವಿದೇಶಿಗರನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಬಿಡುಗಡೆಯಾದವರು ಯಾರು, ಯಾವ ಷರತ್ತುಗಳ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ, ಅವರು ಎಸಗಿದ ಅಪರಾಧಗಳೇನು ಎಂಬ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.

ಅಲ್ಲದೆ, ಕ್ಷಮಾದಾನ ಪಡೆದವರಲ್ಲಿ ಭಯೋತ್ಪಾದನೆ, ನ್ಯಾಯಾಂಗ ನಿಂದನೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಶಿಕ್ಷೆಗೊಳಗಾದ ಪ್ರತಿಭಟನಾಕಾರರು ಸೇರಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ವಿವರ ನೀಡಿಲ್ಲ.

'ಶಿಕ್ಷೆಗೊಳಗಾದವರು ಎಸಗಿದ ಅಪರಾಧಗಳ ಗುಣಲಕ್ಷಣಗಳು, ಜೈಲಿನಲ್ಲಿ ಅವರ ಉತ್ತಮ ನಡವಳಿಕೆ ಮತ್ತು ಆರೋಗ್ಯ ಸ್ಥಿತಿಯನ್ನು ಕೂಲಂಕಷವಾಗಿ ವಿಶ್ಲೇಷಿಸಿ ಕ್ಷಮಾದಾನ ನೀಡಲಾಗಿದೆ' ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ಟ್ರಂಪ್ ಆಡಳಿತವು ಕ್ಯೂಬಾ ಸರ್ಕಾರದ ಮೇಲೆ ವಿಪರೀತ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಬಿಡುಗಡೆ ನಡೆದಿದೆ. ಕಳೆದ ಹಲವಾರು ತಿಂಗಳುಗಳಿಂದ ವಿಧಿಸಲಾಗಿರುವ ತೈಲ ದಿಗ್ಬಂಧನವು ದೇಶದಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವಾಗಿದ್ದು, ಅನೇಕ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries