HEALTH TIPS

ಅಮೆರಿಕ ದಾಳಿ ಬೆನ್ನಲ್ಲೇ ಕೊಲ್ಲಿಯ 8 ಸೇತುವೆಗಳ ಹಿಟ್ ಲಿಸ್ಟ್ ಪ್ರಕಟಿಸಿದ ಇರಾನ್

 ಟೆಹರಾನ್: ಕೊಲ್ಲಿ ರಾಷ್ಟ್ರಗಳಲ್ಲಿ ಎಂಟು ಸೇತುವೆಗಳ 'ಹಿಟ್ ಲಿಸ್ಟ್' ಅನ್ನು ಇರಾನ್ ಪ್ರಕಟಿಸಿದೆ.

ಇರಾನ್‌ನ ಸೇತುವೆ ಸೇರಿದಂತೆ ಮೂಲಸೌಕರ್ಯಗಳ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ ಪ್ರತೀಕಾರ ತೀರಿಸುವುದಾಗಿ ಇರಾನ್ ಬೆದರಿಕೆ ಹಾಕಿದೆ. 


ಇರಾನ್‌ನ ಅತಿ ಎತ್ತರದ ಬಿ1 ಸೇತುವೆಯ ಮೇಲೆ ದಾಳಿ ನಡೆಸಿ ಧ್ವಂಸ ನಡೆಸಲಾಗಿತ್ತು.

ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರಗಳು ಹಾಗೂ ಜಾರ್ಡನ್‌ನ ಪ್ರಮುಖ ಸೇತುವೆಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರಿಯಾಗಿಸಿದೆ ಎಂದು ಇರಾನ್‌ನ ಅರೆ-ಸರ್ಕಾರಿ ಫಾರ್ಸ್ ನ್ಯೂಸ್ ಏಜೆನ್ಸಿ ತಿಳಿಸಿದೆ.

ವರದಿಯ ಪ್ರಕಾರ, ಕುವೈತ್‌ನ ಶೇಖ್ ಬಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ, ಯುಎಇಯಲ್ಲಿ ಶೇಖ್ ಜಾಯೇದ್ ಸೇತುವೆ, ಅಲ್ ಮಖ್ತಾ ಸೇತುವೆ, ಶೇಖ್ ಖಲೀಫಾ ಸೇತುವೆ, ಸೌದಿ ಅರೇಬಿಯಾದಿಂದ ಬಹರೇನ್ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ ಮತ್ತು ಜಾರ್ಡನ್‌ನಲ್ಲಿ ಕಿಂಗ್ ಹುಸೇನ್ ಸೇತುವೆ, ದಾಮಿಯಾ ಸೇತುವೆ ಮತ್ತು ಅಬ್ದೌನ್ ಸೇತುವೆಗಳು ಇರಾನ್‌ನ ಹಿಟ್ ಲಿಸ್ಟ್‌ನಲ್ಲಿವೆ.

ಇರಾನ್ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ...

ಗುರುವಾರದಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿ ಇರಾನ್‌ನ ಅತಿ ಎತ್ತರದ ಸೇತುವೆಯನ್ನು ಭಾಗಶಃ ಧ್ವಂಸಗೊಳಿಸಿತ್ತು.

ಇನ್ನೂ ನಿರ್ಮಾಣ ಹಂತದಲ್ಲಿರುವ 136 ಮೀಟರ್ ಎತ್ತರದ ಬಿ1 ಸೇತುವೆ ಟೆಹರಾನ್ ನಗರವನ್ನು ಪಶ್ಚಿಮ ನಗರವಾದ ಕರಾಜ್ ಅನ್ನು ಸಂಪರ್ಕಿಸುತ್ತದೆ.

ಇರಾನ್ ಅನ್ನು ಶಿಲಾಯುಗಕ್ಕೆ ಮರಳಿಸುವುದಾಗಿ ಟ್ರಂಪ್ ಬೆದರಿಕೆ ಒಡ್ಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries