HEALTH TIPS

ಮಕ್ಕಳ ಮೇಲೂ ಯುದ್ಧದ ಕರಿನೆರಳು; ಸಾವಿನ 'ಆಟ'ದಲ್ಲಿ ಗೊಂಬೆಯ ಶವಯಾತ್ರೆ

 ಗಾಜಾಪಟ್ಟಿ: ಯುದ್ಧದ ನಿಜವಾದ ಪರಿಣಾಮಗಳನ್ನು ಅಂಕಿ ಅಂಶಗಳು ಸಹ ಸ್ಪಷ್ಟವಾಗಿ ಹೇಳುವುದಿಲ್ಲ, ಆದರೆ ಒಂದು ವಿಡಿಯೊ ತುಣುಕು ಮನಸ್ಸನ್ನು ಮೌನಕ್ಕೆ ದೂಡಿಬಿಡುತ್ತದೆ. 


ಯುದ್ಧದ ಭೀಕರ ಕರಾಳತೆ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವ ಮನಕಲಕುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗಾಜಾದ ಪುನರ್ವಸತಿ ಶಿಬಿರದಲ್ಲಿ ಐವರು ಪುಟಾಣಿ ಮಕ್ಕಳು ಸೇರಿ ನಡೆಸಿದ 'ಶವಯಾತ್ರೆ'ಯ ವಿಡಿಯೊ ಇದೀಗ ಭಾವುಕ ಚರ್ಚೆಗೆ ಕಾರಣವಾಗಿದೆ. ವಿಡಿಯೊವನ್ನು ಪ್ಯಾಲೆಸ್ಟೀನಿಯದ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಈ ಶವಯಾತ್ರೆಯಲ್ಲಿ ಪ್ರಾರ್ಥನೆಯ ಧ್ವನಿಯಿಲ್ಲ, ಹಿರಿಯರ ಮಾರ್ಗದರ್ಶನವಿಲ್ಲ, ಬದಲಿಗೆ ಪುಟ್ಟ ಪುಟ್ಟ ಕೈಗಳು ಒಟ್ಟಾಗಿ ಸ್ಟ್ರೆಚರ್‌ ಹಿಡಿದಿವೆ. ಅದನ್ನು ತಲೆ ಮತ್ತು ಭುಜಗಳ ಮೇಲೆ ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತ ಸಾಗುತ್ತಾರೆ. ಆ ಸ್ಟ್ರೆಚರ್‌ ಮೇಲೆ ಮಲಗಿರುವುದು ಮನುಷ್ಯನಲ್ಲ, ಒಂದು ಪುಟ್ಟ ಗೊಂಬೆ.

ಮಕ್ಕಳ ಸಾಮಾನ್ಯ ಆಟವಂತೆ ಕಂಡರೂ ತಮ್ಮ ಸುತ್ತ ನಡೆಯುತ್ತಿರುವ ಸಾವು, ವಿದಾಯ ಮತ್ತು ಹಾನಿಯನ್ನು ಮಕ್ಕಳು ಅನುಕರಿಸಿರುವುದು ಕಾಣುತ್ತದೆ. ತುಂಟಾಟ, ನಗು, ಚೆಷ್ಠೆ ಮತ್ತು ಆಟ-ಪಾಠಗಳಿಂದ ಬೆಳೆಯಬೇಕಾಗಿರುವ ಮಕ್ಕಳ ಬದುಕಿನಲ್ಲಿ ಶೋಕ ಮತ್ತು ಅಂತ್ಯಕ್ರಿಯೆ ಅವರ ಆಟದ ಭಾಗವಾಗಿರುವುದನ್ನು ಈ ದೃಶ್ಯ ಕಟ್ಟಿಕೊಟ್ಟಿದೆ.

ಆಟಗಳು ಅವರ ಬದುಕಿನಿಂದ ದೂರವಾಗಿದ್ದು ಮನಸ್ಸಿಗೆ ಅರ್ಥವಾಗದ ದುಃಖವನ್ನು ಈ ರೀತಿಯಲ್ಲಿ ಮಕ್ಕಳು ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಾಜಾ ನರಮೇಧ: ಪ್ರಿಯಾಂಕಾ ಗಾಂಧಿಯನ್ನು 'ಘಜನಿ'ಗೆ ಹೋಲಿಸಿದ ಬಿಜೆಪಿ'ಗಾಜಾ ಶಾಂತಿ ಮಂಡಳಿ' ಮೊದಲ ಸಭೆಯಲ್ಲಿ 'ವೀಕ್ಷಕ' ರಾಷ್ಟ್ರವಾಗಿ ಭಾರತ ಭಾಗಿ

ಮಕ್ಕಳ ಮೇಲೆ ಯುದ್ಧದ ನೆರಳು

2023ರ ಅಕ್ಟೋಬರ್‌ನಲ್ಲಿ ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಬಳಿಕ ಆರಂಭವಾದ ಯುದ್ಧವು ಗಾಜಾದ ಬದುಕನ್ನು ಸಂಪೂರ್ಣವಾಗಿ ಬದಲಿಸಿದೆ. 2025ರಲ್ಲಿ ಯುದ್ಧ ವಿರಾಮ ಘೋಷಿಸಿದ್ದರೂ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿಯೇ ಉಳಿದಿದೆ.

ಗಾಜಾಪಟ್ಟಿಯಲ್ಲಿ ಜೀವನಕ್ಕೆ ಆಸರೆಯಾಗಿದ್ದ ವ್ಯವಸ್ಥೆಗಳು ನಾಶವಾಗಿರುವುದರಿಂದ ಜನರ ಬದುಕು ತೀವ್ರ ಸಂಕಷ್ಟದಿಂದ ಕೂಡಿದೆ. ಮಕ್ಕಳು, ಮಹಿಳೆಯರ ಬದುಕು ಕರಾಳವಾಗಿದ್ದು ಮಾನವೀಯ ನೆರವಿನ ಅಗತ್ಯವಿದೆ. ಮಕ್ಕಳ ಮೇಲೆ ಹಿಂಸಾಚಾರ, ಭದ್ರತಾ ಅಪಾಯಗಳು ಹಾಗೂ ಮಾನಸಿಕ ಗಾಯಗಳು ವ್ಯಾಪಕವಾಗಿವೆ ಎಂದು ಯುನಿಸೆಫ್‌ ವರದಿ ತಿಳಿಸಿದೆ.

ಅಪೌಷ್ಟಿಕತೆ ಇಲ್ಲಿನ ಮಕ್ಕಳ ಬದುಕಿಗೆ ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕ ಆಹಾರ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಮಕ್ಕಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಅನೇಕ ಶಾಲೆಗಳ ಮೇಲೆ ದಾಳಿಯಾಗಿರುವುದರಿಂದ ಶಿಕ್ಷಣ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ ಎಂದು ಯುನಿಸೆಫ್‌ ಹೇಳಿದೆ.

ಮಾನವೀಯ ನಷ್ಟ...

ಎರಡು ವರ್ಷ ನಡೆದ ಯುದ್ಧದಲ್ಲಿ ಭಾರೀ ಮಾನವೀಯ ನಷ್ಟವಾಗಿದೆ. 75 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ. ಮೃತರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಪ್ರಮಾಣ ಶೇ 40ರಷ್ಟಿದೆ ಎಂದು ದಿ ಗಾರ್ಡಿಯನ್ ಪತ್ರಿಕೆಯ ಅಧ್ಯಯನ ವರದಿ ತಿಳಿಸಿದೆ.

ಈ ಅಂಕಿ ಅಂಶಗಳಿಗಿಂತ ಮನಸ್ಸನ್ನು ಕಲುಕಿದ್ದು ಪುಟಾಣಿಗಳ ಶವಯಾತ್ರೆ. ಯುದ್ಧವು ಒಂದು ಪೀಳಿಗೆಯ ಬಾಲ್ಯವನ್ನು ಹೇಗೆ ಕಸಿದುಕೊಳ್ಳುತ್ತದೆ ಎಂದು ಈ ವಿಡಿಯೊ ಜಗತ್ತಿಗೆ ನೆನಪಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries