HEALTH TIPS

ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾ ವಶ-ಕಾಸರಗೋಡು ನಿವಾಸಿ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 62 ಕಿಲೋ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ  ಹನೀಫಾ (38) ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.

ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ಟಿ.ಬಿ. ಜಂಕ್ಷನ್ ಬಳಿ ಎರ್ನಾಕುಳಂ ಗ್ರಾಮಾಂತರ ಜಿಲ್ಲಾ 'ಡಾನ್ಸಾಫ್' ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಕಾರಿನ ಹಿಂದಿನ ಭಾಗದ ಆಸನದ ಹಿಂಭಾಗದಲ್ಲಿ ಗುಪ್ತ ಕೋಶ ರಚಿಸಿ ಇದರೊಳಗೆ ಗಾಂಜಾವನ್ನು ಪ್ಲಾಸ್ಟಿಕ್ ಶೀಟ್‍ನಲ್ಲಿ 31 ಪೆÇಟ್ಟಣಗಳಲ್ಲಾಗಿ ಅವಿತಿರಿಸಲಾಗಿತ್ತೆಂದು ಪೆÇಲೀಸರು ತಿಳಿಸಿದ್ದಾರೆ.  ಗಾಂಜಾವನ್ನು ಆರೋಪಿ ಕಾರಿನಲ್ಲಿ ಒಡಿಶಾದಿಂದ ತಂದು ಕೋಟ್ಟಾಯಂಗೆ ಸಾಗಿಸಲೆತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ. 

ಆಂಧ್ರಪ್ರದೇಶ, ಒಡಿಶಾ ಭಾಗದಿಂದ ಭಾರೀ ಪ್ರಮಾಣದಲ್ಲಿ ಗಾಂಜಾ ಕೇರಳಕ್ಕೆ ಸಾಗಿಸುವ ಜಾಲವೊಂದು ಸಕ್ರಿಯವಾಗಿದ್ದು, ಬಳಸುದಾರಿಯಾಗಿ ಕೇರಳಕ್ಕೆ ರವಾನಿಸುತ್ತಿರುವುದಾಗಿ ಮಾಹಿತಿಯಿದೆ.


  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries