ಕಾಸರಗೋಡು: ರಸ್ತೆಯಲ್ಲಿ ಅಡ್ಡಬಂದ ಹಾವನ್ನು ರಕ್ಷಿಸಲು ಲಾರಿಯೊಂದು ಏಕಾಏಕಿ ಬ್ರೇಕ್ ಅದುಮಿದ ಹಿನ್ನೆಲೆಯಲ್ಲಿ ಹಿಂಭಾಗದಲ್ಲಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಲಾರಿಗೆ ಡಿಕ್ಕಿಯಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಹಲವು ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪೆರ್ಲ ಸನಿಹದ ಬಜಕೂಡ್ಲು ನಿವಾಸಿ ಶಿಕ್ಷಕಿಯೊಬ್ಬರಿಗೆ ಮೂಗಿಗೆ ಗಯಗಳಾಗಿದ್ದು, ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ರಸ್ತೆಯಲ್ಲಿ ಅಡ್ಡ ಸಂಚರಿಸುತ್ತಿದ್ದ ಹಾವನ್ನು ರಕ್ಷಿಸಲು ಲಾರಿ ಚಾಲಕ ಏಕಾಏಕಿ ಲಾರಿಯನ್ನು ನಿಲ್ಲಿಸಲು ಯತ್ನಿಸಿದಾಗ, ಹಿಂಭಾಗದಿಂದ ಆಗಮಿಸುತ್ತಿದ್ದ ಬಸ್ ಲಾರಿಗೆ ಡಿಕ್ಕಿಯಾಗಿ ಬಸ್ಸಿನ ಒಂದು ಪಾಶ್ರ್ವ ಹಾನಿಗೀಡಾಗಿದೆ. ಲಾರಿ ಚಾಲಕನ ಪ್ರಯತ್ನ ಫಲಿಸದೆ ಕೊನೆಗೂ ಹಾವು ಲಾರಿ ಚಕ್ರದಡಿ ಸಿಲುಕಿ ಪ್ರಾಣ ಬಿಟ್ಟಿದೆ.


