ಮಂಜೇಶ್ವರ: ಮಂಜೇಶ್ವರದ ಮಾಜಿ ಶಾಸಕ ಎಂ. ರಾಮಪ್ಪ ಮಾಸ್ತರ್ ಅವರ 35ನೇ ಸಂಸ್ಮರಣೆ ಸಮ್ಮೇಳನ ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಜರಗಿತು. ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಮಿತಿ ಸದಸ್ಯ ಜಯರಾಂ ಬಲ್ಲಂಗುಡೇಲ್, ರಾಮಕೃಷ್ಣ ಕಡಂಬಾರ್, ಜಿಲ್ಲಾ ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫ ಕಡಂಬಾರ್, ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ, ಹರೀಶ್ ಕೆ.ಆರ್ ಹಾಗೂ ಗಂಗಾಧರ ಕೊಡ್ಡೆ ಉಪಸ್ಥಿತರಿದ್ದರು. ಅಜಿತ್ ಲಾಲ್‍ಬಾಗ್ ಸ್ವಾಗತಿಸಿ, ಶ್ರೀಧರ ಆರ್.ಕೆ ವಂದಿಸಿದರು.

.jpg)
