ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ "ಕೊಲ್ಲೂರು ಕ್ಷೇತ್ರ ಮಹಾತ್ಮೆ" ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ನಾರಾಯಣ ನಾವಡ ಮೂಡಂಬೈಲು, ಚಂದ್ರಕುಮಾರ್ ಬಲಿಪಗುಳಿ, ಶಾಶ್ವತಿ ನಾವಡ ಮೂಡಂಬೈಲು ಹಾಗೂ ಶಾರ್ವರಿ ನಾವಡ ಮೂಡಂಬೈಲು ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು , ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು.

.jpg)
