HEALTH TIPS

‘ಹದಗೆಟ್ಟ ಹವಾಮಾನದಿಂದ ತಪ್ಪಿದ ದಾರಿ-ಕೆಳ ಮಟ್ಟದಲ್ಲಿ ಹಾರಾಟ’; ಕೋಸ್ಟ್ ಗಾರ್ಡ್ ವಿವರಣೆ

ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನದ ಮೇಲ್ಬದಿ ಹಾರಾಟ ನಡೆಸಿದ ಹೆಲಿಕಾಪ್ಟರ್ ಬಗ್ಗೆ ಕೋಸ್ಟ್ ಗಾರ್ಡ್ ವಿವರಣೆ ನೀಡಿದೆ. ಹದಗೆಟ್ಟ ಹವಾಮಾನದಿಂದಾಗಿ ಹೆಲಿಕಾಪ್ಟರ್ ದಾರಿ ತಪ್ಪಿದೆ ಎಂದು ಕೋಸ್ಟ್ ಗಾರ್ಡ್ ಹೇಳಿದೆ. ಹೆಲಿಕಾಪ್ಟರ್ ಈ ಮಾರ್ಗಕ್ಕೆ ಬಂದಿದ್ದು ಅಧಿಕೃತ ಕಾರ್ಯಾಚರಣೆಯ ಭಾಗವಾಗಿ ಅಲ್ಲ ಎಂದು ವಿವರಣೆಯಲ್ಲಿ ಹೇಳಲಾಗಿದೆ. 


ಘಟನೆ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿತ್ತು. ಹೆಲಿಕಾಪ್ಟರ್ ಸನ್ನಿಧಾನದಲ್ಲಿ ಧ್ವಜಸ್ತಂಭದಿಂದ ಕೇವಲ ಐದು ಅಡಿ ಎತ್ತರದಲ್ಲಿ ಹಾರಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಬರಿಮಲೆ ಎಡಿಜಿಪಿ ಎಸ್. ಶ್ರೀಜಿತ್ ಅವರಿಗೆ ಸೂಚಿಸಲಾಗಿದೆ.

ಹೆಲಿಕಾಪ್ಟರ್ ರಾಡಾರ್ ವ್ಯವಸ್ಥೆಯನ್ನು ಬಳಸದೆ ಪ್ರಯಾಣಿಸುತ್ತಿತ್ತು. ಅದರಲ್ಲಿದ್ದ ಸೈನಿಕರು ತಮ್ಮ ಪ್ರಯಾಣದ ಸಮಯದಲ್ಲಿ ದೇವಾಲಯವನ್ನು ನೋಡಿ ದೃಶ್ಯವನ್ನು ತಮ್ಮ ಮೊಬೈಲ್ ಪೋನ್‍ಗಳಲ್ಲಿ ಚಿತ್ರೀಕರಿಸಿರುವ  ಸೂಚನೆಗಳೂ ಇವೆ. ನೀಲಕ್ಕಲ್‍ನಿಂದ ಸನ್ನಿಧಾನಂವರೆಗಿನ ಪ್ರದೇಶವನ್ನು ಹೈ-ಸೆಕ್ಯುರಿಟಿ ವಲಯವೆಂದು ಪರಿಗಣಿಸಲಾಗಿದೆ. ಪೋಲೀಸರ ವಿಶೇಷ ಅನುಮತಿಯೊಂದಿಗೆ ಮಾತ್ರ ಡ್ರೋನ್‍ಗಳನ್ನು ಸಹ ಇಲ್ಲಿ ಹಾರಲು ಅನುಮತಿಸಲಾಗಿದೆ. ಹೆಲಿಕಾಪ್ಟರ್ ಸನ್ನಿಧಾನದ ತುದಿಯನ್ನು ತಲುಪಿದಾಗ ಈ ಮಾಹಿತಿ ಬೆಳಕಿಗೆ ಬಂದಿತು ಮತ್ತು ಅಲ್ಲಿದ್ದ ನೌಕರರು ಮತ್ತು ಕಾರ್ಮಿಕರು ಅದನ್ನು ಗಮನಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries