HEALTH TIPS

ವಿಶ್ವಸಂಸ್ಥೆಯಲ್ಲಿ ಅಮೆರಿಕ, ಇರಾನ್ ವಾಕ್ಸಮರ: ಎನ್‍ಪಿಟಿ ಸಮ್ಮೇಳನದಲ್ಲಿ ಇರಾನ್ ಪಾತ್ರಕ್ಕೆ ಅಮೆರಿಕ ಆಕ್ಷೇಪ

ವಿಶ್ವಸಂಸ್ಥೆ: ಇರಾನ್‍ನ ಪರಮಾಣು ಕಾರ್ಯಕ್ರಮ ಮತ್ತು ಪರಮಾಣು ಪ್ರಸರಣ ರಹಿತ ಒಪ್ಪಂದ(ಎನ್‍ಪಿಟಿ)ವನ್ನು ಪರಿಶೀಲಿಸುವ ಸಮ್ಮೇಳನದ ಉಪಾಧ್ಯಕ್ಷತೆಗೆ ಇರಾನ್ ಆಯ್ಕೆಯಾಗಿರುವುದನ್ನು ಅಮೆರಿಕ ವಿರೋಧಿಸಿದ ಬಳಿಕ ಸೋಮವಾರ ವಿಶ್ವಸಂಸ್ಥೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ವಾಕ್ಸಮರ ನಡೆದಿರುವುದಾಗಿ ವರದಿಯಾಗಿದೆ.

1970ರಲ್ಲಿ ಜಾರಿಗೆ ಬಂದ ಎನ್‍ಪಿಟಿಯ ಅನುಷ್ಠಾನವನ್ನು ಪರಿಶೀಲಿಸಲು 11ನೇ ಸಮ್ಮೇಳನವು ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಸೋಮವಾರ ಪ್ರಾರಂಭವಾಯಿತು. ವಿವಿಧ ಗುಂಪುಗಳು 34 ಸಮ್ಮೇಳನ ಉಪಾಧ್ಯಕ್ಷರನ್ನು ನಾಮನಿರ್ದೇಶನ ಮಾಡಿದ್ದು ಅಲಿಪ್ತ ಮತ್ತು ಇತರ ದೇಶಗಳ ಗುಂಪು ಇರಾನ್ ಅನ್ನು ಉಪಾಧ್ಯಕ್ಷತೆಗೆ ಆಯ್ಕೆ ಮಾಡಿರುವುದಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿಶ್ವಸಂಸ್ಥೆಗೆ ವಿಯೆಟ್ನಾಮ್‍ನ ರಾಯಭಾರಿ ಡೊ ಹುಂಗ್ ವಿಯೆಟ್ ಘೋಷಿಸಿದರು. ಇದನ್ನು ಆಕ್ಷೇಪಿಸಿದ ಅಮೆರಿಕದ ಪ್ರತಿನಿಧಿ ಇರಾನ್ ಅನ್ನು ಆಯ್ಕೆ ಮಾಡಿರುವುದು ಎನ್‍ಪಿಟಿಗೆ ಮಾಡಿದ ಅವಮಾನ ಎಂದು ಟೀಕಿಸಿತು. `ಎನ್‍ಪಿಟಿಯ ಪ್ರಸರಣ ರಹಿತ ಬದ್ಧತೆಗೆ ಇರಾನ್ ತನ್ನ ತಿರಸ್ಕಾರವನ್ನು ದೀರ್ಘಕಾಲ ಪ್ರದರ್ಶಿಸಿದೆ ಎಂಬುದು ನಿರ್ವಿವಾದವಾಗಿದೆ. ಅಲ್ಲದೆ ತನ್ನ ಪರಮಾಣು ಕಾರ್ಯಕ್ರಮಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ವಿಶ್ವಸಂಸ್ಥೆಯ ಪರಮಾಣು ವಾಚ್‍ಡಾಗ್(ಮೇಲುಸ್ತುವಾರಿ ಸಮಿತಿ)ನೊಂದಿಗೆ ಸಹಕರಿಸಲು ನಿರಾಕರಿಸಿದೆ. ಆದ್ದರಿಂದ ಇರಾನ್‍ನ ಆಯ್ಕೆಯು ಈ ಸಮ್ಮೇಳನದ ವಿಶ್ವಾಸಾರ್ಹತೆಗೆ ನಾಚಿಕೆಗೇಡಿನ ಮತ್ತು ಮುಜುಗರದ ವಿಷಯವಾಗಿದೆ' ಎಂದು ಅಮೆರಿಕದ ಪ್ರತಿನಿಧಿ ಪ್ರತಿಪಾದಿಸಿದರು.

ಅಮೆರಿಕದ ಹೇಳಿಕೆಯು ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿದ್ದು ಇದನ್ನು ತಿರಸ್ಕರಿಸುತ್ತೇವೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ಇರಾನ್ ನ ಪ್ರತಿನಿಧಿ ರೆಝಾ ನಜಾಫಿ ಪ್ರತಿಕ್ರಿಯಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ಮತ್ತು ತನ್ನ ಪರಮಾಣು ಶಸ್ತ್ರಾಗಾರವನ್ನು ಆಧುನೀಕರಿಸಲು ಮತ್ತು ವಿಸ್ತರಿಸುವುದನ್ನು ಮುಂದುವರಿಸಿರುವ ಏಕೈಕ ದೇಶವಾಗಿರುವ ಅಮೆರಿಕ ತನ್ನನ್ನು ಅನುಸರಣೆಯ ಮಧ್ಯಸ್ಥಗಾರನಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತಿರುವುದು ಅಸಮರ್ಥನೀಯವಾಗಿದೆ ಎಂದು ನಜಾಫಿ ಟೀಕಿಸಿದ್ದಾರೆ.

ಪರಮಾಣು ಕಾರ್ಯಕ್ರಮದ ವಿಷಯವು ಇರಾನ್ ಮತ್ತು ಅಮೆರಿಕ ಹಾಗೂ ಇಸ್ರೇಲ್ ನಡುವೆ ಎರಡು ತಿಂಗಳು ನಡೆದ ಯುದ್ಧದ ಪ್ರಮುಖ ವಿಷಯವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries