ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 50ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿರುವ ಮಂಜೇಶ್ವರ ಠಾಣೆ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ಆಲಂಪಾಡಿ ಟಿಪ್ಪು ನಗರ ನಿವಾಸಿ ಸಿ. ಎ. ಮುಹ್ಮದ್ ಸಹಾಲ್, ಎರ್ನಾಕುಳಂ ನಾರ್ತ್ ಪರವೂರು ನಿವಾಸಿ ಅರುಣ್ ಕುಮಾರ್, ಕೋಯಿಕ್ಕೋಡ್ ಪುತ್ತೂರ್ ಮಯೂರ ಹೌಸ್ ನಿವಾಸಿ ಎಂ. ಪಿ. ಅನುಷ್ ಬಂಧಿತರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭಾಸ್ಕರ ರೆಡ್ಡಿ ಅವರ ನಿರ್ದೇಶ ಮೇರೆಗೆ ಮಂಜೇಶ್ವರ ಠಾನೆ ಪೆÇಲೀಸ್ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠರ ವಿಶೇಷ ದಳ ನಡೆಸಿರುವ ಜಂಟಿ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ. ಖಚಿತ ಸುಳಿವಿನ ಮೇರೆಗೆ ಕಾರನ್ನು ಹಿಂಬಾಲಿಸಿ ಮಂಜೇಶ್ವರ ಪಾವೂರು ಸ್ನೇಹಾಲಯ ಸಮೀಪ ತಡೆದು, ಕಾರ್ಯಾಚರಣೆ ನಡೆಸಲಾಗಿದೆ.

