ಕಾಸರಗೋಡು : ಕುತ್ತಿಕೋಲು ಶ್ರೀ ತಂಬುರಾಟಿ ಕ್ಷೇತ್ರ ಸಮೀಪದ ಗುಡ್ಡೆ ಪ್ರದೇಶದಲ್ಲಿ ನಡೆಯುತ್ತಿದ್ದ ಎರಡು ಪ್ರತ್ಯೇಕ ಜೂಜಾಟ ಕೇಂದ್ರಗಳಿಗೆ ದಾಳಿ ನಡೆಸಿದ ಬೇಡಡ್ಕ ಠಾಣೆ ಪೆÇಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಆಡೂರು ಪಳ್ಳಂಬಿ ಪುದಿಯಕಂಡಂ ಹೌಸ್ ನಿವಾಸಿ ಗಂಗಾಧರನ್ (41), ಬಂದಡ್ಕ ಕನ್ನಮೂಲ್ ನಿವಾಸಿ ಅಬೂಬಕ್ಕರ್ (24), ಬಂದಡ್ಕ ಮಾರಿಪದವು ಕುನ್ನೇಲ್ ಹೌಸ್‍ನ ಎನ್.ಕೆ. ರಾಧಾ ಕೃಷ್ಣನ್ (45), ಚಾಮಕೊಚ್ಚಿ ಅಣ್ಣಾಪ್ಪು ಡಿಯ ಎಸ್. ಸುಧಾಕರ (39), ಬೇಡಗಂ ಅಂಬಿಲಾಡಿ ಹೌಸ್‍ನ ಬಿ.ಅಶ್ರಫ್ (34)ಬಂಧಿತರು.
ಇವರಿಂದ ಜೂಜಾಟಕ್ಕೆ ಬಳಸಿದ್ದ ಒಟ್ಟು 6350ರೂ. ನಗದು ವಶಪಡಿಸಿಕೊಳ್ಳಲಾಗಿದೆ.

