ಕಾಸರಗೋಡು: ಕಾಪಾ ಕಾಯ್ದೆ ಪ್ರಕಾರ ಮಧೂರು ಸಮೀಪದ ಚೆಟ್ಟುಂಗುಳಿ ನಿವಾಸಿ ಅಬ್ದುಲ್ ಅಶ್ಫಾಕ್ (35)ಎಂಬಾಥನನ್ನು ವಿದ್ಯಾನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈತನನ್ನು ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ವಿದ್ಯಾನಗರ, ಕಾಸರಗೋಡು ಸೇರಿದಂತೆ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೇಸು ದಾಖಲಾಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

