ಕಾಸರಗೋಡು: ಮೀಂಜ ಕುಳೂರು ಕರಿಪ್ಪಾರ ನಿವಾಸಿ, ಟೈಲರಿಂಗ್ ವೃತ್ತಿಯ ಬಾಲಕೃಷ್ಣ ಶೆಟ್ಟಿ (62) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಇವರು ಕುಂಬಳೆಯ ಟೈಲರಿಂಗ್‍ಸಂಸ್ಥೆಯೊಂದರಲ್ಲಿ ಕಟ್ಟಿಂಗ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಸೌಖ್ಯ ಬಾಧಿತರಾಗಿದ್ದ ಇವರನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್‍ನ ರಾಜ್ಯ ಸಮಿತಿ ಮಾಜಿ ಸದಸ್ಯರಾಗಿದ್ದ ಬಾಲಕೃಷ್ಣ ಶೆಟ್ಟಿಯವರು ಪ್ರಸಕ್ತ ಜಿಲ್ಲಾ ಸಮಿತಿ ಸದಸ್ಯರಾಗಿದ್ದರು. ಅವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.


