ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು. ಆಕರ್ಷಕ ಚೆಂಡೆಮೇಳ, ಹುಲಿ ಕುಣಿತ, ಸಿಂಗಾರಿಮೇಳದೊಂದಿಗೆ ನಡೆದ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಕ್ಷೇತ್ರ ಮೊಕ್ತೇಸರ, ಅಚ್ಚುತ್ತ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿ ಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ರಘು ಮೀಪುಗುರಿ, ವೇಣು ಭಾಮ, ಮೋಹನ್ ರಾಜ್, ಮಿತುನ್ ಕಾಳ್ಯಂಗಾಡು, ಪುಷ್ಪಾವತಿ ಮಹಾಲಿಂಗ ಮೊದಲಾದವರು ನೇತೃತ್ವ ನೀಡಿದರು.
28ರಂದು ಬೆಳಗ್ಗೆ 3.30ಕ್ಕೆ ಗಣಪತಿ ಹೋಮ, 3.50ರಿಂದ 4.21ರ ಬ್ರಾಹ್ಮೀ ಮುಹೂರ್ತದಲ್ಲಿ ನಾಗರಾಜ ಹಾಗೂ ಪರಿವಾರ ದೈವ ದೇವರುಗಳ ಪ್ರತಿಷ್ಠೆ, ಜೀವಕಲಶಾಭಿಷೇಕ, ಉದಯ ಪೂಜೆ, ಸಂಜೆ 7ಕ್ಕೆ ಶ್ರೀದೇವಿಯ ಬಾಲಾಲಯ ಅನುಜ್ಞಾ ಕಲಶ, ವಾಸ್ತುಹೋಮ, ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯುವುದು.


