ಕಾಸರಗೋಡು: ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲಗಳು ಮೇ 10 ಮತ್ತು 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಮೇ.10 ರಂದು ಬೆಳಗ್ಗೆ ಗಣಹೋಮ ,ತಂಬಿಲ, ಪಾನಕಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುವುದು. ಮಧ್ಯಾಹ್ನ ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜನಾ ಸಂಘ, ಮಾಯಿಪ್ಪಾಡಿ ಶ್ರೀ ರಾಜರಾಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂಬಸ್ಥರಿಂದ ಭಜನಾ ಸಂಕೀರ್ತನೆ ನಡೆಯುವುದು. ರಾತ್ರಿ ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಶ್ರೀದೈವದ ಭಂಡಾರದ ಆಗಮನವಾಗಲಿದೆ.
11ರಂದು ಬೆಳಗ್ಗೆ ಶ್ರೀ ಧೂಮಾವತಿ ದೈವದ ಧರ್ಮನೇಮ, ರಾತ್ರಿ ಕೊರತಿದೈವದ ಕೋಲ ನಡೆಯುವುದು. 12ರಂದು ರಾತ್ರಿ ಕೊರತಿ ದೈವದ ಹರಕೆಯ ಕೋಲ ನಡೆಯುವುದು. ಧರ್ಮನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾಯಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ನಡೆಯಿತು.



