HEALTH TIPS

ಶತಾಯುಷಿ ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ ನಿಧನ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಸನಿಹದ ನಿವಾಸಿ, ಶತಾಯುಷಿ  ಕೋಟೆಮನೆ ಎಂ. ವೆಂಕಟರಮಣ ಆಚಾರ್ಯ (101) ಬುಧವಾರ  ಸ್ವ ಗೃಹದಲ್ಲಿ ನಿಧನರಾದರು. ಕಳೆದ ಏಳು ದಶಕಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ರಥಬೀದಿಯಲ್ಲಿ  "ಶ್ರೀ ವಿಶ್ವಕರ್ಮ ಫರ್ನಿಚರ್" ಎಂಬ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುವುದರ ಜತೆಗೆ ಬಡಗಿ ವೃತ್ತಿಯಲ್ಲಿ ಜನಾನುರಾಗಿಯಾಗಿದ್ದರು.   ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜೀವನದ ಸಾರ್ಥಕ 100 ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ 'ಜನುಮದಿನದ ಶತಮಾನೋತ್ಸವ'ವಿಶೇಷ ಕಾರ್ಯಕ್ರಮಗಳೊಂದಿಗೆ ಇವರನ್ನು ಸನ್ಮಾನಿಸಲಾಗಿತ್ತು.  ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಹಿರಿಯ ಸದಸ್ಯರಾಗಿದ್ದ ಇವರನ್ನು ಬ್ಯಾಂಕ್ ನ ಆಡಳಿತ ಮಂಡಳಿ ವತಿಯಿಂದ   ಸನ್ಮಾನಿಸಲಾಗಿತ್ತು. ಅವರು ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries