ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ತಾಲೂಕು ಚಂದ್ರಗಿರಿ ವಲಯದ ಚಮ್ನಾಡ್ ಕಾರ್ಯಕ್ಷೇತ್ರದ ಕೊರಗಜ್ಜ ಸಂಘದ ಬಿಂದು ಅವರ ಪತಿ ಕೃಷ್ಣನ್ ಪಾಶ್ರ್ವವಾಯು ಪೀಡಿತರಾಗಿ ಅನಾರೋಗ್ಯದಿಂದಿದ್ದು ಯೋಜನಾಧಿಕಾರಿಯವರು ಅವರ ಮನೆ ಭೇಟಿ ನೀಡಿದರು. 2025-26ನೇ ಸಾಲಿನ ಸಂಪೂರ್ಣ ಸುರಕ್ಷಾ ನೋಂದಾವಣೆ ಮಾಡಿದ್ದ ಈ ಕುಟುಂಬಕ್ಕೆ ಸಂಪೂರ್ಣ ಸುರಕ್ಷಾ ಸೌಲಭ್ಯ 1,18,000 ರೂ. ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಹಾಗು ಜನಜಾಗೃತಿ ವೇದಿಕೆಯ ಸದಸ್ಯ ಚಂದ್ರ ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

.jpg)
