HEALTH TIPS

ಟೋಲ್‌ಗಳಲ್ಲಿ ಇಂದಿನಿಂದ ಕ್ಯಾಷ್‌ ಇಲ್ಲ; ಡಿಜಿಟಲ್ ಪಾವತಿ ಮಾತ್ರ

 ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ.


ಏಪ್ರಿಲ್‌ 10ರಿಂದ ಟೋಲ್‌ ಶುಲ್ಕವನ್ನು ಇನ್ನು ಮುಂದೆ ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಸೂಚಿಸಿದೆ.

ಸವಾರರಿಗೆ ಸಲಹೆಗಳು...

ನೀವು ಬಳಕೆ ಮಾಡುತ್ತಿರುವ ವಾಹನದ ಫಾಸ್ಟ್‌ಟ್ಯಾಗ್‌ ಸಕ್ರಿಯವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಫಾಸ್ಟ್‌ ಟ್ಯಾಗ್‌ ಖಾತೆಯಲ್ಲಿ ಕನಿಷ್ಠ ಹಣ ಇರುವಂತೆ ನೋಡಿಕೊಳ್ಳಿ.

ಯುಪಿಐ ಸೇವೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ನಗದು ಪಾವತಿಗೆ ಅವಕಾಶ ಇರುವುದಿಲ್ಲ. ಹಾಗೂ ಐಡಿ ಕಾರ್ಡುಗಳನ್ನು ತೋರಿಸಿ ಟೋಲ್‌ ದಾಟುವ ಪದ್ಧತಿಗೂ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಈ ಮೊದಲು ಟೋಲ್‌ ಶುಲ್ಕವನ್ನು ಫಾಸ್ಟ್‌ ಟ್ಯಾಗ್‌ , ಯುಪಿಐ ಅಥವಾ ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿತ್ತು. ಆದರೆ ಇದೀಗ ಎನ್‌ಎಚ್‌ಎಐ ಶುಲ್ಕ ಪಾವತಿಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಟೋಲ್‌ಗಳಲ್ಲಿ ಯುಪಿಐ ಪಾವತಿ ಮತ್ತು ಫಾಸ್ಟ್‌ ಟ್ಯಾಗ್‌ ಮಾತ್ರ ಬಳಕೆಯಲ್ಲಿ ಇರಲಿವೆ.

ನಗದು ಪಾವತಿ ಅಥವಾ ಯು‍ಪಿಐ ಮೂಲಕ ಹಣ ಪಾವತಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದರಿಂದಾಗಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ಸವಾರರ ಸಮಯದ ಉಳಿತಾಯವಾಗಲಿದೆ.

ನಗದು ಪಾವತಿಸಿದಾಗ ಅವರಿಗೆ ಚಿಲ್ಲರೆ ಕೊಡುವ ಗೊಂದಲ ಇಲ್ಲ ಅಲ್ಲದೇ ಇಂಧನ ಉಳಿತಾಯಕ್ಕೂ ಅನುಕೂಲವಾಗಲಿದೆ. ಜತೆಗೆ ತಡೆ ರಹಿತ ಸಂಚಾರಕ್ಕೂ ಸಹಕಾರಿಯಾಗಲಿದೆ. ಟೋಲ್ ಶುಲ್ಕ ಪಾವತಿಯಲ್ಲಿ ಪಾರದರ್ಶಕ ವಹಿವಾಟನ್ನು ಜಾರಿಗೊಳಿಸುವುದು ಇದರ ಮುಖ್ಯ ಉದ್ದೇಶ ಎಂದು ಪ್ರಾಧಿಕಾರ ತಿಳಿಸಿದೆ.

ನಗದು ರಹಿತ ಸೇವೆಯನ್ನು ದೇಶದಾದ್ಯಂತ ಇರುವ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇ ಗಳಲ್ಲಿರುವ 1,550 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಜಾರಿಗೊಳಿಸಲಾಗುತ್ತದೆ. ‍ಪೂರ್ಣ ಡಿಜಿಟಲ್‌ ಪಾವತಿ ಮಾತ್ರ ಇರಲಿದ್ದು, ಒಂದು ವೇಳೆ ನಗದು ಶುಲ್ಕ ಪಾವತಿಸಿದರೆ, ನಿಗದಿತ ಶುಲ್ಕದ ಪಾವತಿಗಿಂತ ಹಲವು ಪಟ್ಟು ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries