HEALTH TIPS

ತೈಲಕ್ಕಾಗಿ ಇರಾನ್‌ ಮೇಲೆ ಯುದ್ಧ ಮಾಡಿಲ್ಲ, ನಮ್ಮ ಉದ್ದೇಶವೇ ಬೇರೆ: ಟ್ರಂಪ್

ವಾಷಿಂಗ್ಟನ್: ಯುದ್ಧಭೂಮಿಯಲ್ಲಿ ನಮ್ಮ ಸಶಸ್ತ್ರ ಪಡೆಗಳು ಕ್ಷಿಪ್ರ, ನಿರ್ಣಾಯಕ ಮತ್ತು ಅದ್ಭುತ ವಿಜಯಗಳನ್ನು ಸಾಧಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಇರಾನ್ ಯುದ್ಧದ ಕುರಿತು ಮೊದಲ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕದ ಪಡೆ ಜಯದ ಸನಿಹದಲ್ಲಿವೆ ಎಂದಿದ್ದಾರೆ.

'ಇರಾನ್‌ನ ಕ್ಷಿಪಣಿ ಮತ್ತು ನೌಕಾಪಡೆಯನ್ನು ನಾಶಪಡಿಸುವುದು, ಈ ಪ್ರದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಅದರ ಬೆಂಬಲಿತ ಗುಂಪುಗಳನ್ನು ಮಟ್ಟಹಾಕುವುದು ಮತ್ತು ಇರಾನ್ ಅಣ್ವಸ್ತ್ರವನ್ನು ಹೊಂದದಂತೆ ಖಾತರಿಪಡಿಸಿಕೊಳ್ಳುವುದು ಈ ಯುದ್ಧದ ಮುಖ್ಯ ಉದ್ದೇಶಗಳಾಗಿವೆ' ಎಂದು ವಿವರಿಸಿದ್ದಾರೆ.

ಮುಂದುವರಿದು, 'ಈ ಸೇನಾ ಕಾರ್ಯಾಚರಣೆಯು ತೈಲ ಸೇರಿದಂತೆ ಇರಾನ್‌ನ ಯಾವುದೇ ಸಂಪನ್ಮೂಲಗಳನ್ನು ಪಡೆಯಲು ಅಲ್ಲ, ಬದಲಿಗೆ ಅಮೆರಿಕದ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡಲು ಕೈಗೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

'ಅಮೆರಿಕದ ಈಗ ಮಧ್ಯಪ್ರಾಚ್ಯದ ಮೇಲೆ ಅವಲಂಬಿತವಾಗಿಲ್ಲ. ನಮಗೆ ಅವರ ತೈಲ ಸೇರಿದಂತೆ ಯಾವುದರ ಅಗತ್ಯವಿಲ್ಲ. ಆದರೆ ಅಲ್ಲಿಗೆ ನಮ್ಮ ಅಗತ್ಯ ಇದೆ. ನಾವು ನಮ್ಮ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡಲು ಅಲ್ಲಿದ್ದೇವೆ' ಎಂದಿದ್ದಾರೆ.

'ಇರಾನ್‌ನಲ್ಲಿ ಎಲ್ಲವೂ ನಾಶ'

ಯುದ್ಧದ ಬಗ್ಗೆ ವಿವರಿಸಿದ ಅವರು, 'ಕಳೆದ ಒಂದು ತಿಂಗಳಿನಿಂದ ನಡೆದ 'ಆಪರೇಷನ್ ಎಪಿಕ್ ಫ್ಯೂರಿ' ಸೇನಾ ಕಾರ್ಯಾಚರಣೆಯು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಉಡಾವಣೆ ಮಾಡುವ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ. ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಹಾಗೂ ರಾಕೆಟ್ ಲಾಂಚರ್‌ಗಳು ಧ್ವಂಸಗೊಂಡಿವೆ' ಎಂದು ಹೇಳಿದ್ದಾರೆ.

ಇರಾನ್‌ನ ನೌಕಾಪಡೆ ಸಂಪೂರ್ಣ ನಿರ್ನಾಮವಾಗಿದೆ. ವಾಯುಪಡೆ ಧ್ವಂಸಗೊಂಡಿದ್ದು, ದೇಶದ ಪ್ರಮುಖ ನಾಯಕರು ಮೃತಪಟ್ಟಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೂಡ ನಾಶವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries