ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ ದೇಶಾದ್ಯಂತ NDPS ಕಾಯ್ದೆಯಡಿ 1,20,010 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಜ್ಯಗಳ ಪೈಕಿ ಕೇರಳದಲ್ಲಿ NDPS ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. 2023ರಲ್ಲಿ ಮಹಾರಾಷ್ಟ್ರದಲ್ಲಿ 15,610 ಹಾಗೂ ಪಂಜಾಬ್ ನಲ್ಲಿ 11,589 ಪ್ರಕರಣಗಳು ವರದಿಯಾಗಿವೆ.
ತಮಿಳುನಾಡು (10,126) ಮತ್ತು ಉತ್ತರ ಪ್ರದೇಶ (9,387) ಹೆಚ್ಚಿನ ಸಂಖ್ಯೆಯಲ್ಲಿ NDPS ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವ ಇತರ ರಾಜ್ಯಗಳಾಗಿವೆ.
ಮಾದಕದ್ರವ್ಯ ಹಾಗೂ ಚಿತ್ತಭ್ರಾಮಕ ಪದಾರ್ಥಗಳ ಬಳಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳನ್ನು ನಿಯಂತ್ರಿಸುವ 1985ರ NDPS ಕಾಯ್ದೆಗೆ 2014ರಲ್ಲಿ ತಿದ್ದುಪಡಿ ಮಾಡಲಾಗಿದೆ.

